ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಮಹೇಶ್ ಬಾಬು ಮತ್ತು ನಟಿ ಶ್ರೀಲೀಲಾ ಜೋಡಿ ಗುಂಟೂರು ಖಾರಂ ಸಿನಿಮಾದಲ್ಲಿ ಸಖ್ಖತ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಯಶಸ್ಸಿನ ನಂತರ, ಶ್ರೀಲೀಲಾ ನಿನ್ನೆ ಮಹೇಶ್ ಬಾಬು ಕುಟುಂಬದೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಿದರು.
ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ ಅವರು ಪ್ರಿನ್ಸ್ ಮಹೇಶ್ ಬಾಬು ಕುಟುಂಬದೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಿದರು. ಗುಂಟೂರು ಖಾರಂ ಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣುತ್ತಿದೆ. ಮಹೇಶ್ ಬಾಬು ಮತ್ತು ಶ್ರೀಲೀಲಾ ಜೋಡಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ನೃತ್ಯ, ನಟನೆ ಮತ್ತು ಸಂಭಾಷಣೆಗಳು ಈ ಚಿತ್ರದಲ್ಲಿ ಗಮನ ಸೆಳೆಯುತ್ತವೆ.
ಈ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಮಹೇಶ್ ಬಾಬು ಫನ್ ಪಾರ್ಟಿ ಆಯೋಜಿಸಿದ್ದರು. ಹೀಗಾಗಿ, ನಟಿಯರಾದ ಶ್ರೀಲೀಲಾ, ಮೀನಾಕ್ಷಿ ಚೌಧರಿ ಮತ್ತು ನಿರ್ಮಾಪಕ ದಿಲ್ ರಾಜು ಮನೆಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮಕರ ಸಂಕ್ರಾಂತಿ ಆಚರಿಸಿ ಫೋಟೋಗಳಿಗೆ ಪೋಸ್ ನೀಡಿದರು.