ಹೊಸದಿಗಂತ ಡಿಜಿಟಲ್ ಡೆಸ್ಕ್:
ರಂಗಿತರಂಗ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ದೊಡ್ಡ ಸಾಧನೆಯಾಗಿದೆ. ಈ ಚಿತ್ರ ಬಿಡುಗಡೆಯಾಗಿ ಸುಮಾರು 10 ವರ್ಷಗಳು ಕಳೆದಿವೆ. ಬಾಹುಬಲಿಯಂತಹ ಬ್ಲಾಕ್‌ಬಸ್ಟರ್‌ಗಳನ್ನು ಸೋಲಿಸುವಲ್ಲಿ ಯಶಸ್ವಿಯಾದ ಈ ಚಿತ್ರದಲ್ಲಿ, ನಾಯಕನಾಗಿ ಅದ್ಭುತವಾಗಿ ನಟಿಸಿರುವ ನಿರೂಪ್ ಭಂಡಾರಿ ಎದುರು ಖಳನಾಯಕನಾಗಿ ಸಾಯಿಕುಮಾರ್ ಅತ್ಯುತ್ತಮವಾದ ಅಭಿನಯವನ್ನು ನೀಡಿದರು. ಪೋಸ್ಟ್ ಮ್ಯಾನ್ ಕಾಳಿಂಗ ಪಾತ್ರದ ಮೂಲಕ ಜನಪ್ರಿಯರಾದ ಸಾಯಿಕುಮಾರ್ ಮತ್ತು ನಿರೂಪ್ ಮತ್ತೆ ಒಂದಾಗಿದ್ದಾರೆ.
ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಯುವ ಪ್ರತಿಭೆ ಸಚಿನ್ ವಾಲಿ ನಿರ್ದೇಶನದ ಹೊಸ ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಸಾಯಿಕುಮಾರ್ ಒಟ್ಟಿಗೆ ನಟಿಸುತ್ತಿದ್ದಾರೆ. ವರ್ಷಗಳ ನಂತರ ಚಿತ್ರತಂಡ ಸೇರಿಕೊಂಡಿರುವುದು ಇವರಿಬ್ಬರ ಜೋಡಿಯ ಬಗ್ಗೆ ಕುತೂಹಲ ಮೂಡಿಸಿದೆ. ನಿರೂಪ್ ತಂದೆಯ ಪಾತ್ರವನ್ನು ಸಾಯಿಕುಮಾರ್ ಮಾಡಿದ್ದಾರೆ. ಈ ಚಿತ್ರದ ಶೀರ್ಷಿಕೆ ಮತ್ತು ಮೊದಲ ನೋಟವು ಫೆಬ್ರವರಿ 6 ರಂದು ಬಿಡುಗಡೆಯಾಗಲಿದೆ.