ಹೊಸದಿಗಂತ ಡಿಜಿಟಲ್ ಡೆಸ್ಕ್:
ಮ್ಯಾಕ್ಸ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಮತ್ತೊಂದು ಸಂತಸದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮ್ಯಾಕ್ಸ್ ಮುಗಿದ ಮೇಲೆ ಅನುಪ್ ಭಂಡಾರಿ ಜೊತೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಇತ್ತ ಅನುಪ್ ಕೂಡ ಫೆಬ್ರವರಿಯಲ್ಲಿ ಹೊಸ ಚಿತ್ರದ ಅಪ್ ಡೇಟ್ ನೀಡುವುದಾಗಿ ಹೇಳಿದ್ದಾರೆ.
ಸುದೀಪ್ ‘ದಿ ಮ್ಯಾಕ್ಸ್ ಮತ್ತು ಬಿಗ್ ಬಾಸ್ ಶೋ’ ನಲ್ಲಿ ಬ್ಯುಸಿಯಾಗಿದ್ದಾರೆ. ಮ್ಯಾಕ್ಸ್ ಚಿತ್ರದ ಮೊದಲ ಭಾಗ ಬಿಡುಗಡೆಯಾದ ನಂತರ, ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ಗಳು ಇರಲಿಲ್ಲ. ಈಗ ಚಿತ್ರದ ಕೆಲಸಗಳು ಎಷ್ಟರ ಮಟ್ಟಿಗೆ ಸಾಗಿದೆ ಎಂಬುದನ್ನು ಸುದೀಪ್ ಹಂಚಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಸುದೀಪ್ ಬಹುನಿರೀಕ್ಷಿತ ಮ್ಯಾಕ್ಸ್ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಸಂಕ್ರಾಂತಿ ನಂತರ ನಾನು ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಪುನರಾರಂಭಿಸುತ್ತೇನೆ. ಈಗಾಗಲೇ ಚಿತ್ರೀಕರಿಸಿದ ಭಾಗದ ಬಗ್ಗೆ ಎಲ್ಲಾ ಪಾತ್ರಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಚಿತ್ರದ ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.