ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿ ನಲ್ಲಿ ಕೇಳಿಬರೋ ಹೆಸರು ಅಂದ್ರೆ ಅದು ವೈಷ್ಣವಿ ಚೈತನ್ಯ. ಬೇಬಿ ಸಿನಿಮಾ ಮೂಲಕ ರಾತ್ರೋರಾತ್ರಿ ಸ್ಟಾರ್ ಆದಾ ನಟಿಗೆ ಈಗ ಸಖತ್ ಆಫರ್‌ಗಳು ಬರುತ್ತಿದ್ದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಲವ್ ಇನ್ 143 ಅವರ್ಸ್, ದಿ ಸಾಫ್ಟ್ ವೇರ್ ಡೆವಲಪರ್, ಅರೆರೆ ಮಾನಸ, ಮಿಸ್ಸಮ್ಮ, ಕಿರುಚಿತ್ರಗಳ ಮೂಲಕ ನಟಿಯಾಗಿ ಖ್ಯಾತಿ ಗಳಿಸಿದ ವೈಷ್ಣವಿ ಚೈತನ್ಯ ನಂತರ ಅಲಾ ವೈಕುಂಠಪುರಮುಲೋ, ವರುಡು ಕವಲೇನು ನಂತಹ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಎಲ್ಲರ ಮನಗೆದ್ದರು. ಚೆನ್ನಾಗಿ ನಟಿಸಿದರೂ ಅಷ್ಟಾಗಿ ಮನ್ನಣೆ ಸಿಗಲಿಲ್ಲ.
ಆದರೆ ‘ಬೇಬಿ’ ಅವರ ಜೀವನವನ್ನೇ ಬದಲಾಯಿಸಿತು. ಚಿತ್ರದಲ್ಲಿ ವೈಷ್ಣವಿ ಚೈತನ್ಯ ನಾಯಕಿಯಾಗಿ ನಟಿಸಿದ್ದರೆ, ಆನಂದ್ ದೇವರಕೊಂಡ ಮತ್ತು ವಿರಾಜ್ ಅಶ್ವಿನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ. ಈ ಚಿತ್ರ ಬರೋಬ್ಬರಿ 100 ಕೋಟಿ ಗಳಿಕೆ ಮಾಡಿತ್ತು.
ಹೀಗಾಗಿ ವೈಷ್ಣವಿ ಚೈತನ್ಯ ತಮ್ಮ ಸಂಭಾವನೆ ಕೂಡ ಹೆಚ್ಚು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಒಂದು ಹೊಸ ಸಿನಿಮಾಕ್ಕಾಗಿ ವೈಷ್ಣವಿ ಚೈತನ್ಯ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಆಫರ್ ಮಾಡಿದ್ದಾರೆ. ಅದು ಕೂಡ ಈ ಚಿತ್ರ ಯುವ ನಿರ್ಮಾಪಕ ಮತ್ತು ನಿರ್ದೇಶಕರೊಬ್ಬರದ್ದು ಎನ್ನುವ ಮಾಹಿತಿ ಇದೆ.