ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ,ಸಖತ್ ಕಲೆಕ್ಷನ್ ಮಾಡಿರುವ ವಿಕ್ಕಿ ಕೌಶಲ್ ಅಭಿನಯದ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನಾಧಾರಿತ ‘ಛಾವಾ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವನ್ನು ದಿನೇಶ್ ವಿಜನ್ ಮ್ಯಾಡಾಕ್ ಫಿಲ್ಮ್ಸ್‌ಗಾಗಿ ನಿರ್ಮಿಸಿದ್ದು, ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ವಿನೀತ್ ಕುಮಾರ್ ಸಿಂಗ್ ಮತ್ತು ಅಶುತೋಷ್ ರಾಣಾ ನಟಿಸಿರುವ ಈ ಚಿತ್ರವು ಏಪ್ರಿಲ್ 11 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ನೆಟ್‌ಫ್ಲಿಕ್ಸ್ ಈ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದೆ.
ಹಿಂದಿ ಚಿತ್ರರಂಗದ ಮೂರನೇ ಅತಿದೊಡ್ಡ ಹಿಟ್ ಸಿನಿಮಾ ಛಾವಾ ಭಾರತದ ನಿವ್ವಳದಲ್ಲಿ ₹599 ಕೋಟಿ ಸಂಗ್ರಹಿಸಿದ್ದು,ವಿಶ್ವಾದ್ಯಂತ ₹804 ಕೋಟಿ ಸಂಗ್ರಹಿಸಿದೆ ಎಂದು ವರದಿಯಾಗಿದೆ.