ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ (ಇವಿ ಪಾಲಿಸಿ 2.0) ತರಲು ರೆಡಿಯಾಗಿದ್ದು, ಈ ಹೊಸ ಎಲೆಕ್ಟ್ರಿಕ್ ವಾಹನ ನೀತಿಯ ಕರಡು ರಿಲೀಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸ ವಾಹನ ನೀತಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚಾಗಿ ಬಳಸುವುದಕ್ಕೆ ಪ್ರೋತ್ಸಾಹ ನೀಡುವುದು, ಪೆಟ್ರೋಲ್-ಡೀಸೆಲ್, ಸಿಎನ್‌ಜಿ ಇಂಧನದ ವಾಹನಗಳನ್ನ ನಿಷೇಧಿಸುವ ಬಗ್ಗೆ ಮಾತುಕತೆ ನಡೀತಿದೆ.
2025ರ ಆಗಸ್ಟ್ 15ರಿಂದ ದೆಹಲಿಯಲ್ಲಿ ಸಿಎನ್‌ಜಿ ಆಟೋ ರಿಕ್ಷಾಗಳನ್ನ ನೋಂದಣಿ ಮಾಡುವುದಿಲ್ಲ. ಜೊತೆಗೆ 10 ವರ್ಷಕ್ಕಿಂತ ಹಳೆಯ ಸಿಎನ್‌ಜಿ ಆಟೋರಿಕ್ಷಾಗಳನ್ನು ಎಲೆಕ್ಟ್ರಿಕ್‌ಗೆ ವಾಹನವಾಗಿ ಪರಿವರ್ತಿಸಬೇಕು. 2026 ಆಗಸ್ಟ್‌ನಿಂದ ಎಲೆಕ್ಟ್ರಿಕ್ ಅಲ್ಲದ ದ್ವಿಚಕ್ರ ವಾಹನಗಳನ್ನು (ಸ್ಕೂಟರ್-ಬೈಕ್) ರಿಜಿಸ್ಟ್ರೇಷನ್ ಮಾಡುವುದನ್ನು ನಿಲ್ಲಿಸಲಾಗುತ್ತದೆ.
ಇನ್ನು ದೆಹಲಿಯಲ್ಲಿ ಪ್ರತಿ ಮನೆಯಲ್ಲೂ 3ನೇ ಕಾರು ತೆಗೆದುಕೊಂಡರೆ ಅದು ಎಲೆಕ್ಟ್ರಿಕ್ ಆಗಿರಬೇಕು ಎಂದು ಕರಡು ನಿಯಮ ಹೇಳುತ್ತದೆ. ಅಂದರೆ, ಎರಡು ಕಾರು ಇರೋರು 3ನೇ ಕಾರು ತೆಗೆದುಕೊಂಡರೆ ಅದು ಎಲೆಕ್ಟ್ರಿಕ್ ಕಾರ್ ಮಾತ್ರ ಆಗಿರಬೇಕು ಎಂಬ ನಿಯಮ ಕೂಡ ಹೊಸ ವಾಹನ ನೀತಿಯಲ್ಲಿದೆ.