ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಂತನು ಗುಪ್ತಾರ “ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್” ಪುಸ್ತಕ ಆಧರಿತ ‘ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’ ಎಂಬ ಶೀರ್ಷಿಕೆಯ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕೂಡ ಆಗಿದ್ದು, ಚಿತ್ರವು ದೇಶದ ಯುವಕರಿಗೆ ಅತ್ಯಂತ ಪ್ರೇರಣಾದಾಯಕವಾಗಿದೆ. ಇದು ಹಳ್ಳಿಯ ಮಧ್ಯಮ ವರ್ಗದ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುವ ಕಥೆಯ ತೋರಿಸುತ್ತದೆ ಎಂದು ನಿರ್ದೇಶಕ ರವೀಂದ್ರ ಗೌತಮ್ ಹೇಳಿದ್ದಾರೆ.
ಮೋಷನ್ ಪೋಸ್ಟರ್‌ನಲ್ಲಿ ನಟ ಅನಂತ್ ಜೋಶಿ, ಯೋಗಿ ಆದಿತ್ಯನಾಥ್ ಪಾತ್ರವನ್ನು ನಿರ್ವಹಿಸಿದ್ದಾರೆ. ಜೊತೆಗೆ ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್ ನಿರಾಹುವಾ, ಅಜಯ್ ಮೆಂಗಿ, ಪವನ್ ಮಲ್ಹೋತ್ರಾ, ಗರಿಮಾ ಸಿಂಗ್, ರಾಜೇಶ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಮೀಟ್ ಬ್ರದರ್ಸ್ ಸಂಗೀತ ನೀಡಿದ್ದು, ದಿಲೀಪ್ ಬಚ್ಚನ್ ಝಾ ಮತ್ತು ಪ್ರಿಯಾಂಕ್ ದುಬೆ, ಛಾಯಾಗ್ರಹಣ ನಿರ್ದೇಶಕ ವಿಷ್ಣು ರಾವ್ ಮತ್ತು ನಿರ್ಮಾಣ ವಿನ್ಯಾಸಕ ಉದಯ್ ಪ್ರಕಾಶ್ ಸಿಂಗ್ ಬರೆದಿದ್ದಾರೆ.