ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್‌ಸ್ಟಾರ್ ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಎಲ್ 2: ಎಂಪುರಾನ್ ಸಿನಿಮಾ ಅದ್ದೂರಿಯಾಗಿ ತೆರೆ ಕಂಡಿದ್ದು, ಮೊದಲ ದಿನವೇ ಅಭಿಮಾನಿಗಳು ಮೆಚ್ಚಿಗೊಂಡಿದ್ದಾರೆ .
ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿರುವ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿಕೊಂಡಿದೆ.
ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರತದಲ್ಲಿ 22 ಕೋಟಿ ರೂಪಾಯಿ ಬಾಚಿದೆ ಎಂದು ಹೇಳಲಾಗಿದೆ. ಮಲಯಾಳಂ ಭಾಷೆಯಲ್ಲಿ 19.45 ಕೋಟಿ ರೂಪಾಯಿ, ತೆಲುಗು ಭಾಷೆಯಲ್ಲಿ 1.2 ಕೋಟಿ ರೂಪಾಯಿ, ತಮಿಳು ಭಾಷೆಯಲ್ಲಿ 80 ಲಕ್ಷ ರೂಪಾಯಿ, ಕನ್ನಡ ಭಾಷೆಯಲ್ಲಿ 5 ಲಕ್ಷ ರೂಪಾಯಿ, ಹಿಂದಿ ಭಾಷೆಯಲ್ಲಿ 50 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಇನ್ನು ವಿದೇಶದಲ್ಲೂ ಅಭಿಮಾನಿಗಳನ್ನು ತಲುಪಿರುವ ಸಿನಿಮಾ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.
ಈ ಸಿನಿಮಾಕ್ಕೆ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದೂ, ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಅಭಿಮನ್ಯು ಸಿಂಗ್, ಥೋವೀನೋ ಥಾಮಸ್, ಸೂರಜ್, ಸಾನಿಯಾ ಅಯ್ಯಪ್ಪನ್ ಮುಂತಾದವರು ನಟಿಸಿದ್ದಾರೆ.