ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ, ನಿರ್ದೇಶಕ ಹೇಮಂತ್ ಎಂ.ರಾವ್ ನಿರ್ಮಾಣದ ಮರ್ಡರ್ ಮಿಸ್ಟರಿ ಜಾನರ್ ‘ಅಜ್ಞಾತವಾಸಿ’ ಸಿನಿಮಾ ಏ.11ಕ್ಕೆ ಬಿಡುಗಡೆಯಾಗಲಿದೆ.
ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಸಿನಿಮಾ ಚಿತ್ರಕಥೆೆಗೆ ಭಿನ್ನ ಸ್ಪರ್ಶ ನೀಡಿ ತೆರೆಗೆ ಬರಲಿದೆ.
ಇದು ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ಶುರುವಾಗುವ ಕಥೆ, ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಕೇಸ್ ಕೂಡ ಅಲ್ಲಿ ದಾಖಲಾಗಿರುವುದಿಲ್ಲ. 1997ರಲ್ಲಿ ಅಲ್ಲೊಂದು ಕೊಲೆ ಪ್ರಕರಣ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುದೇ ಕಥೆ.
ತಾರಾಂಗಣದಲ್ಲಿ ನಟ ರಂಗಾಯಣ ರಘು. ಪಾವನ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಅಭಿನಯಿಸಿದ್ದಾರೆ. ಅದ್ವೈತ ಛಾಯಾಚಿತ್ರಗ್ರಹಣ, ಚರಣ್ ರಾಜ್ ಸಂಗೀತ, ಭರತ್ ಎಂ.ಸಿ ಸಂಕಲನ ಚಿತ್ರಕ್ಕಿದೆ.