ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE)ನ 10ನೇ ತರಗತಿ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್(ICSE) ಮತ್ತು 12ನೇ ತರಗತಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC) ಫಲಿತಾಂಶ ಇಂದು ಪ್ರಕಟವಾಗಲಿದೆ.
ಫಲಿತಾಂಶ ನೋಡುವುದು ಹೇಗೆ?:
ಮಂಡಳಿಯ ಸೂಚನೆಯ ಪ್ರಕಾರ, ವಿದ್ಯಾರ್ಥಿಗಳು ಸಿಐಎಸ್ಸಿಇಯ ವೆಬ್‌ಸೈಟ್ http://cisce.org ಅಥವಾ http: //results.cisce.orgಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದು.
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೀಕ್ಷಿಸಲು ತಮ್ಮ ಐಡಿ ನಮೂದಿಸಬೇಕಾಗುತ್ತದೆ. ಸಿಐಎಸ್ಸಿಇ ಬೋರ್ಡ್ ಫಲಿತಾಂಶಗಳು digilocker.gov.in ನಲ್ಲಿಯೂ ಲಭ್ಯವಿರುತ್ತದೆ.
ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ ಇಲ್ಲಿ ತಿಳಿಯಿರಿ:
ಸ್ಟೆಪ್ 1: ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ
ಸ್ಟೆಪ್ 2: ‘ಫಲಿತಾಂಶಗಳು’ ಟ್ಯಾಬ್ ಮೇಲೆ ಕ್ಲಿಕ್ಕಿಸಿ
ಸ್ಟೆಪ್ 3: ಸಂಬಂಧಿತ ಕೋರ್ಸ್ ಆಯ್ಕೆ ಮಾಡಿ – ICSE/ ISC
ಸ್ಟೆಪ್ 4: ನಿಮ್ಮ ಐಡಿ ಸಂಖ್ಯೆಯನ್ನು ನಮೂದಿಸಿವಿವರ ಸಲ್ಲಿಸಿ
ಸ್ಟೆಪ್ 5: ಮುಂದಿನ ರೆಫರೆನ್ಸ್ ಗಾಗಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ