ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲಸ ಮಾಡುವ ಕಂಪನಿಯು ಉದ್ಯೋಗಿಗಳಿಗೆ ಬೋನಸ್ ನೀಡಿದ್ರೆ ಸಾಕು ನಮ್ಮ ಬಾಸ್ ಒಳ್ಳೆ ಮನುಷ್ಯ ಎಂದು ಹೊಗಳುತ್ತಾರೆ. ಆದರೆ ಡಿಸ್ನಿಲ್ಯಾಂಡ್‌ಗೆ ಒಟ್ಟಿಗೆ ಪ್ರವಾಸದ ಅವಕಾಶವನ್ನು ನೀಡಿದರೆ ಆ ಉದ್ಯೋಗಿಗಳ ಸಂತೋಷಕ್ಕೆ ಮಿತಿ ಇದೆಯೇ? ಅದೂ ಉಚಿತವಾಗಿ ಉದ್ಯೋಗಿಗಳಿಗಷ್ಟೇ ಅಕ್ಕ ಅವರ ಸಂಪೂರ್ಣ ಕುಟುಂಬಕ್ಕೆ ಸೇರಿ ಅಂದ್ರೆ ಇನ್ನೆಷ್ಟು ಖುಷಿ ಆಗಬಹುದು?. ಹೌದು, ಸಿಟಾಡೆಲ್ ಸಂಸ್ಥಾಪಕ ಮತ್ತು ಸಿಇಒ ಕೆನ್ ಗ್ರಿಫಿನ್ ಅವರು ವಿಮಾನ ಟಿಕೆಟ್ ಇಂದ ಹಿಡಿದು ಇಡೀ ಪ್ರವಾಸದ ಎಲ್ಲಾ ಖರ್ಚು ಕಂಪನಿಯದ್ದೇ ಎಂದು ಹೇಳಿದ್ದಾರೆ. ಗ್ರಿಫಿನ್ 10,000 ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಡಿಸ್ನಿಲ್ಯಾಂಡ್ ಪ್ರವಾಸವನ್ನು ಏರ್ಪಡಿಸಿದ್ದಾರೆ.
ಸಿಇಒ ಕೆನ್ ಗ್ರಿಫಿನ್ ಅವರು ಕಂಪನಿಯ 10,000 ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಡಿಸ್ನಿಲ್ಯಾಂಡ್‌ಗೆ ಮೂರು ದಿನಗಳ ಉಚಿತ ಪ್ರವಾಸವನ್ನು ಏರ್ಪಡಿಸಿದ್ದಾರೆ. ಗ್ರಿಫಿನ್ ಉದ್ಯೋಗಿಗಳ ನಿವಾಸಗಳಿಂದ ಫ್ಲೋರಿಡಾದ ಡಿಸ್ನಿಲ್ಯಾಂಡ್‌ಗೆ ವಿಮಾನ ಟಿಕೆಟ್‌ಗಳನ್ನು ಸಹ ವ್ಯವಸ್ಥೆ ಮಾಡಿದರು.
ಉದ್ಯೋಗಿಗಳು ಸಂಸ್ಥೆಗೆ ಮಾಡುತ್ತಿರುವ ಸೇವೆ ಗುರುತಿಸಿದ ಗ್ರಿಫಿನ್ ತಮ್ಮ ಕುಟುಂಬಗಳೊಂದಿಗೆ ಪ್ರವಾಸವನ್ನು ಆನಂದಿಸಲು ಅವಕಾಶ ಮಾಡಿಕೊಟ್ಟರು. ಈ ಮೂರು ದಿನಗಳ ಪ್ರವಾಸದಲ್ಲಿ ಉದ್ಯೋಗಿಗಳಿಗೆ ಒಂದು ರೂಪಾಯಿ ಖರ್ಚು ಮಾಡದೆ ವಿಮಾನ ಟಿಕೆಟ್, ಆಹಾರ ಮತ್ತು ಇತರ ವೆಚ್ಚಗಳನ್ನು ಕಂಪನಿಯು ಭರಿಸಲಿದೆ.