ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ಹಾಗೂ ವರುಣ್ ಧವನ್ ಅಭಿನಯದ ‘ಸಿಟಾಡೆಲ್: ಹನಿ ಬನಿ’ ಟೀಸರ್ ರಿಲೀಸ್ ಆಗಿದೆ. ವರುಣ್ ಧವನ್ ಜೊತೆ ಆ್ಯಕ್ಷನ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಒಟಿಟಿ ರಿಲೀಸ್ ಕುರಿತು ಫ್ಯಾನ್ಸ್ಗೆ ಸಿಹಿಸುದ್ದಿ ಕೂಡ ಸಿಕ್ಕಿದೆ.
ಸಿಟಾಡೆಲ್: ಹನಿ ಬನಿ’ ಟ್ರೈಲರ್ನಲ್ಲಿ ಸಮಂತಾ ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ನವೆಬ್ ಸರಣಿಯಲ್ಲಿ ಸಮಂತಾ ಆ್ಯಕ್ಷನ್ ಅವತಾರ ತಾಳಿದ್ದಾರೆ. ಅದ್ಧೂರಿಯಾಗಿ ‘ಹನಿ ಬನಿ’ ಚಿತ್ರೀಕರಣವನ್ನು ಮಾಡಲಾಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲಿಯೂ ವೆಬ್ ಸರಣಿಯ ಶೂಟಿಂಗ್ ಮಾಡಲಾಗಿದೆ.
ಈ ಟ್ರೇಲರ್ನಲ್ಲಿ ಆಕ್ಷನ್ ಜೊತೆ ವರುಣ್ ಜೊತೆ ರೊಮ್ಯಾನ್ಸ್ ಸೀನ್ಗಳು ಕೂಡ ಇದ್ದು, ಸೀರೀಸ್ಗಾಗಿ ಜನ ಎದುರು ನೋಡುತ್ತಿದ್ದಾರೆ.