ತಲೆಲಿ ರಕ್ತ ಸೋರುತ್ತಿದ್ದರೂ ರಾತ್ರಿಯಿಡೀ ಸುತ್ತಾಡ್ಸಿದಾರೆ: ಪೊಲೀಸರ ಮೇಲೆ ಸಿಟಿ ರವಿ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇಲೆ ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿರುವ ಪೊಲೀಸರು ಸಿಟಿ ರವಿ ಅವರನ್ನು ರಾತ್ರಿ ಇಡೀ ಸುತ್ತಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ರಾತ್ರಿ ನನಗೆ ಒಟ್ಟು ಮೂರು ಜಿಲ್ಲೆಗಳ ದರ್ಶನ ಮಾಡಿಸಿದ್ದಾರೆ. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ ದರ್ಶನ ಮಾಡಿಸಿದ್ದಾರೆ. ಇದೆಲ್ಲ ಸರ್ವಾಧಿಕಾರಿ ಸರ್ಕಾರದಲ್ಲಿ ಮಾತ್ರ ಸಾಧ್ಯ. ಇದು ಹೆಚ್ಚು ದಿನ ನಡೆಯಲ್ಲ. ಎಲ್ಲದಕ್ಕೂ ಲೆಕ್ಕಚುಕ್ತಾ ಆಗಿಯೇ ಆಗುತ್ತದೆ. ಆರೋಗ್ಯ ತಪಾಸಣೆ ಆಗಿಲ್ಲ.ರಕ್ತ ಸೋರುತ್ತಿದ್ದರೂ ಯಾರೂ ಕ್ಯಾರೆ ಅಂದಿಲ್ಲ. ಯಾವ ಕಾರಣಕ್ಕೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿಲ್ಲ. ಎಫ್​ಐಆರ್ ಪ್ರತಿ ಕೂಡ ನೀಡಿಲ್ಲ. ಜನಪ್ರತಿನಿಧಿಯನ್ನು ಹೇಗೆ ನಡೆಸಿಕೊಳ್ಳಬೇಕೋ ಹಾಗೆ ನನ್ನ ನಡೆಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್​ಪಿ ಭೀಮಾ ಶಂಕರ್ ನೇತೃತ್ವದಲ್ಲಿ ಫುಲ್​ ಸುತ್ತಾಟ ಮಾಡಲಾಗಿದೆ ಎನ್ನಲಾಗಿದೆ. ಯರಗಟ್ಟಿ ಬಳಿಯ ಡಾಬಾದಲ್ಲಿ ಇಂದು ಬೆಳಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಕೋರ್ಟ್​ಗೆ ಸಿಟಿ ರವಿ ಹಾಜರು ಪಡಿಸುವ ಸಾಧ್ಯತೆ ಇದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!