ಮಹಾರಾಷ್ಟ್ರದ ನಾಗ್ಪುರದಲ್ಲಿ ಸಿವಿಲ್ 20 ಇಂಡಿಯಾ 2023 ಇನ್ಸೆಪ್ಶನ್ ಕಾನ್ಫರೆನ್ಸ್ : ಜಗತ್ತಿನಾದ್ಯಂತ ಪ್ರತಿನಿಧಿಗಳು ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತದ G20 ಪ್ರೆಸಿಡೆನ್ಸಿ ಅಡಿಯಲ್ಲಿ ಮೂರು ದಿನಗಳ ಸಿವಿಲ್ 20 ಇಂಡಿಯಾ 2023 ಇನ್ಸೆಪ್ಶನ್ ಕಾನ್ಫರೆನ್ಸ್ ಸೋಮವಾರದಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿದೆ.

ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಿ20 ರಾಷ್ಟ್ರಗಳ ನಾಗರಿಕ ಸಮಾಜದ ಪ್ರತಿನಿಧಿಗಳು ಭಾನುವಾರ ನಾಗ್ಪುರ ತಲುಪಿದ್ದಾರೆ. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಪ್ರತಿನಿಧಿಗಳನ್ನು ಮಹಾರಾಷ್ಟ್ರ ಸಂಪ್ರದಾಯದೊಂದಿಗೆ ಸ್ವಾಗತಿಸಲಾಯಿತು.

ಜಿ20 ರಾಷ್ಟ್ರಗಳು ಮತ್ತು ಇತರ ದೇಶಗಳ ನಾಗರಿಕ ಸಮಾಜದ ಸುಮಾರು 250 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

C20 ಭಾರತವು G20 ಯ ಅಧಿಕೃತ ಗುಂಪಾಗಿದ್ದು, ಇದು G20 ನಲ್ಲಿನ ವಿಶ್ವ ನಾಯಕರಿಗೆ ಜನರ ಆಕಾಂಕ್ಷೆಗಳನ್ನು ಎತ್ತಿತೋರಿಸಲು ಪ್ರಪಂಚದಾದ್ಯಂತದ ನಾಗರಿಕ ಸಮಾಜ ಸಂಸ್ಥೆಗಳಿಗೆ ವೇದಿಕೆಯನ್ನು ಒದಗಿಸುತ್ತದೆ.

ಎರಡು ದಿನಗಳ ಸಭೆಯು ಇಂದು ಮಧ್ಯಾಹ್ನ ಮಾತಾ ಅಮೃತಾನಂದಮಯಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಪಸ್ಥಿತಿಯಲ್ಲಿ ನಾಗ್ಪುರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉದ್ಘಾಟನೆಯಾಗಲಿದೆ.

ಸಿ-20 ಗಾಗಿ ಸಿದ್ಧಪಡಿಸಲಾದ 14 ವಿವಿಧ ವಿಷಯಗಳನ್ನು ಈ ಆರಂಭಿಕ ಸಭೆಯಲ್ಲಿ ಚರ್ಚಿಸಲಾಗುವುದು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾರ್ಚ್ 21 ರಂದು ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

G20 ಒಕ್ಕೂಟವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ದೇಶಗಳನ್ನು ಒಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!