ಬಿಕ್ಕಟ್ಟಿನಲ್ಲಿರೋ ಕ್ರೆಡಿಟ್ ಸ್ಯೂಸ್‌ ಖರೀದಿಗೆ ಮುಂದಾದ ಯುಬಿಎಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರೋ ಕ್ರೆಡಿಟ್‌ ಸ್ಯೂಸ್‌ ಅನ್ನು ಸ್ವಿಸ್ ಬ್ಯಾಂಕ್‌ ದೈತ್ಯ ಯುಬಿಎಸ್‌ ಖರೀದಿಸಲಿದೆ. ಸುಮಾರು 3 ಬಿಲಿಯನ್‌ ಡಾಲರ್‌ ಗೂ ಅಧಿಕ ಮೊತ್ತದಲ್ಲಿ ಖರೀದಿಸಲು ಯುಬಿಎಸ್‌ ಸಮ್ಮತಿಸಿದೆ. ಈ ಕುರಿತು ಭಾನುವಾರ ಪ್ರಮುಖ ಮಾತುಕತೆಗಳು ನಡೆದಿವೆ ಎಂದು ಮೂಲಗಳು ವರದಿ ಮಾಡಿವೆ. ಕ್ರೆಡಿಟ್‌ ಸ್ಯೂಸ್‌ ಕುಸಿತವು ವ್ಯಾಪಕ ಅಂತರಾಷ್ಟ್ರೀಯ ಹಣಕಾಸು ಬಿಕ್ಕಟ್ಟು ಸೃಷ್ಟಿಸಬಹುದು ಎಂಬ ಕಾರಣಕ್ಕೆ ಸ್ವಿಜರ್‌ಲ್ಯಾಂಡ್‌ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಈ ಖರೀದಿ ಒಪ್ಪಂದ ಏರ್ಪಡಲು ಕಾರಣವಾಗಿದೆ.

ಸ್ವಿಟ್ಜರ್ಲೆಂಡ್‌ನ ಅತಿದೊಡ್ಡ ಬ್ಯಾಂಕ್ ಯುಬಿಎಸ್ ಎರಡನೇ ಅತಿದೊಡ್ಡ ಬ್ಯಾಂಕ್‌ ಕ್ರೆಡಿಟ್‌ ಸ್ಯೂಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದವು ದೇಶಾದ್ಯಂತ ಮತ್ತು ಅದರಾಚೆಗೆ ಹರಡುವ ಆರ್ಥಿಕ ಪ್ರಕ್ಷುಬ್ಧತೆಯನ್ನು ತಡೆಯಲು ಪ್ರಮುಖವಾಗಿದೆ ಎಂದು ಸರ್ಕಾರ ಹೇಳಿದೆ. ಈ ಕ್ರಮವನ್ನು ವಾಷಿಂಗ್ಟನ್, ಬ್ರಸೆಲ್ಸ್ ಮತ್ತು ಲಂಡನ್‌ನಲ್ಲಿ‌ ಸ್ವಾಗತಿಸಲಾಗಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಯುಬಿಎಸ್‌ ಸಂಸ್ಥೆಯು ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ರೆಡಿಸ್‌ ಸ್ಯೂಸ್‌ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಿದ್ದು ಕ್ರೆಡಿಟ್‌ ಸ್ಯೂಸ್‌ ಷೇರುಗಳ 2007ರಲ್ಲಿನ ಗರಿಷ್ಟ ಮಟ್ಟಕ್ಕಿಂತ 99 ಶೇಕಡಾದಷ್ಟು ಕಡಿಮೆ ಬೆಲೆಗೆ ಖರೀದಿಯಾಗಲಿದೆ.

ಒಪ್ಪಂದದ ಭಾಗವಾಗಿ, ಸುಮಾರು 16 ಶತಕೋಟಿ ಫ್ರಾಂಕ್‌ (17.3 ಶತಕೋಟಿ ಡಾಲರ್)‌ ಕ್ರೆಡಿಟ್ ಸ್ಯೂಸ್ ಬಾಂಡ್‌ಗಳನ್ನು ಅಳಿಸಿಹಾಕಲಾಗುತ್ತದೆ. ಯುರೋಪಿಯನ್ ಬ್ಯಾಂಕ್ ನಿಯಂತ್ರಕರು ಸಂಕಷ್ಟದ ಸಮಯದಲ್ಲಿ ಬ್ಯಾಂಕುಗಳಿಗೆ ಬಂಡವಾಳದ ನೆಲೆಯನ್ನು ಒದಗಿಸಲು ಈ ರೀತೀಯ ಬಾಂಡುಗಳನ್ನು ಬಳಸುತ್ತಾರೆ. ಆದರೆ ಈ ಬಾಂಡ್‌ಗಳನ್ನು ಬ್ಯಾಂಕ್‌ನ ಬಂಡವಾಳವು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಾದರೆ ಅಳಿಸಿಹಾಕಲಾಗುತ್ತದೆ. ಸ್ವಿಸ್ ಒಪ್ಪಂದದ ಸುದ್ದಿಯ ನಂತರ, ವಿಶ್ವದ ಕೇಂದ್ರ ಬ್ಯಾಂಕುಗಳು ಮುಂಬರುವ ವಾರದಲ್ಲಿ ಬ್ಯಾಂಕುಗಳನ್ನು ಸ್ಥಿರಗೊಳಿಸಲು ಸಂಘಟಿತ ಹಣಕಾಸು ಕ್ರಮಗಳನ್ನು ಘೋಷಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!