ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ನಾವು ಯಾರನ್ನಾದರೂ ಅಭಿನಂದಿಸುವಾಗ ಚಪ್ಪಾಳೆ ತಟ್ಟುತ್ತೇವೆ. ಆ ಚಪ್ಪಾಳೆ ತಟ್ಟುವುದರ ಹಿಂದೆ ಅನೇಕರಿಗೆ ಗೊತ್ತಿರದ ಆರೋಗ್ಯಕಾರಿ ಲಾಭಗಳಿವೆ. ‘ಲಾಫಿಂಗ್ ಥೆರಪಿ’ಯಂತೆ ‘ಕ್ಲಾಪಿಂಗ್ ಥೆರಪಿ’ ಕೂಡ ಈಗ ಫೇಮಸ್ ಆಗಿದೆ. ಚಪ್ಪಾಳೆ ಹಿಂದಿರುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ..
ಅಂಗೈಗಳು ರಕ್ತನಾಳಗಳು ಮತ್ತು ನರ ತುದಿಗಳನ್ನು ಹೊಂದಿರುತ್ತವೆ. ನೀವು ಅವುಗಳನ್ನು ಉತ್ತೇಜಿಸಿದರೆ ನಿಮ್ಮ ಆರೋಗ್ಯ ಸಮಸ್ಯೆಗಳು ಗುಣವಾಗುತ್ತವೆ. ಅಚ್ಚರಿ ಎನಿಸಿದರೂ ಇದು ಸತ್ಯ.
- ಚಪ್ಪಾಳೆ ತಟ್ಟುವುದು ಆತಂಕವನ್ನು ನಿಯಂತ್ರಿಸಲು ಸುಲಭವಾದ ಮಾರ್ಗವಾಗಿದೆ.
- ಚಪ್ಪಾಳೆ ತಟ್ಟಲು ಪ್ರಾರಂಭಿಸಿದಾಗ, ಧನಾತ್ಮಕ ಸಂಕೇತಗಳು ಮೆದುಳಿಗೆ ಹೋಗುತ್ತವೆ. ಇದು ಹತಾಶೆಯನ್ನು ತೆಗೆದುಹಾಕುತ್ತದೆ. ದೈನಂದಿನ ವ್ಯಾಯಾಮದಲ್ಲಿ ಚಪ್ಪಾಳೆಗಳನ್ನು ಸೇರಿಸುವುದು ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಚಪ್ಪಾಳೆ ತಟ್ಟುವುದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
- ಕೈ ಚಪ್ಪಾಳೆ ತಟ್ಟಿದಾಗ ದೇಹದಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ.
- ಅನೇಕ ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮೇಲಾಗಿ ಚಪ್ಪಾಳೆ ತಟ್ಟುವುದರಿಂದ ಉಸಿರಾಟದ ತೊಂದರೆಯೂ ಕಡಿಮೆಯಾಗುತ್ತದೆ.
- ಚಪ್ಪಾಳೆ ತಟ್ಟುವಿಕೆಯು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
- ಮಕ್ಕಳು ನಿಯಮಿತವಾಗಿ ಚಪ್ಪಾಳೆ ತಟ್ಟುವುದರಿಂದ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ.