Sunday, October 5, 2025

ಕುಡಿಯುವ ನೀರಿನ ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ತುಮಕೂರು :

ಕುಡಿಯುವ ನೀರಿನ ವಿಚಾರಕ್ಕಾಗಿ ಪರಸ್ಪರ ಎರಡು ಗುಂಪುಗಳು ಗಲಾಟೆ ಮಾಡಿಕೊಂಡು ಕೊಲೆಯಲ್ಲಿ ಅಂತ್ಯ ಕಂಡಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಪೋಲೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಎರಡು ಗುಂಪುಗಳ ನಡುವೆ ಪ್ರಾರಂಭವಾದ ಜಗಳ ಆನಂದ್ (32) ಎಂಬತನನ್ನು ನಾಗೇಶ್ ಎಂಬ ವ್ಯಕ್ತಿ ದ್ವೇಷದಿಂದ ಅಟ್ಟಾಡಿಸಿಕೊಂಡು ಹೊಡೆದುದ್ದಲ್ಲದೆ ನಡೆದುಕೊಂಡು ಹೋಗುತ್ತಿದ್ದ ಆನಂದನ ಮೇಲೆ ಬೊಲೇರೊ ವಾಹನದ ಚಕ್ರಗಳನ್ನು ಹತ್ತಿಸಿ ಸಾಯಿಸಿರುವ ಘಟನೆ ಗುರುವಾರ ನಡೆದಿದೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀನಿವಾಸ್ ಪ್ರಸಾದ್ ಆರೋಪಿ ನಾಗೇಶ್ ಮೇಲೆ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.