ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ 5ನೇ ತರಗತಿ ಬಾಲಕಿ ಮೇಲೆ ಕಾಮುಕರ ಗ್ಯಾಂಗ್‌ವೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತ್ರಿಪುರಾದ ದಕ್ಷಿಣಭಾಗದ ಜಿಲ್ಲೆಯೊಂದರಲ್ಲಿ ನಡೆದಿದೆ.
ಶಾಲೆಯಿಂದ ಮಗಳು ಹಿಂದಿರುಗದೇ ಇದ್ದಾಗ ಸಂತ್ರಸ್ತ ಬಾಲಕಿಯ ಪೋಷಕರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದ್ದಾರೆ. ಎಷ್ಟೇ ಹುಡುಕಿದರೂ ಸಿಗದೇ ಇದ್ದಾಗ ತ್ರಿಪುರಾದ ಬೆಲೊನಿಯಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಾಲೆಗೆ ಹೋದ ಮಗಳು ಮನೆಗೆ ಬರಲಿಲ್ಲ ಎಂಬ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದಾಗ ಶನಿವಾರ ಸಂಜೆ ಸಂತ್ರಸ್ತ ಬಾಲಕಿಯ ಮನೆ ಹತ್ತಿರದಲ್ಲಿ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಾಲಕಿಯ ಪರಿಚಯಸ್ಥನೊಬ್ಬ ಮನೆ ಬಳಿ ಬಿಟ್ಟು ಹೋಗಿರುವುದು ನಂತರ ಗೊತ್ತಾಗಿದೆ. ತನಿಖೆ ಮಾಡಿದಾಗ ಆತ ಅದೇ ಬಡಾವಣೆಯ 22 ವರ್ಷದ ಹುಡುಗ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.