ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ನೃತ್ಯ ಪ್ರಕಾರಗಳ ಅತ್ಯುತ್ತಮ ಪ್ರತಿಪಾದಕರಲ್ಲಿ ಒಬ್ಬರಾದ ಡಾ ಕನಕ್ ರೆಲೆ ಬುಧವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.
ಪದ್ಮಭೂಷಣ ಪುರಸ್ಕೃತರಾದ ಡಾ ರೆಲೆ ಅವರು ನಳಂದ ನೃತ್ಯ ಸಂಶೋಧನಾ ಕೇಂದ್ರದ ಸ್ಥಾಪಕ-ನಿರ್ದೇಶಕಿ ಮತ್ತು ಮುಂಬೈ ನಳಂದಾ ನೃತ್ಯ ಮಹಾವಿದ್ಯಾಲಯದ ಸ್ಥಾಪಕ-ಪ್ರಾಂಶುಪಾಲರಾಗಿದ್ದರು.
ರೆಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಡಾ.ರೆಲೆ ಅವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರಚಾರ ಮತ್ತು ಸಂಶೋಧನೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು ಮತ್ತು ಶಾಸ್ತ್ರೀಯ ನೃತ್ಯವನ್ನು ಜನರಿಗೆ ಪರಿಚಯಿಸಿದವರು, ಅವರ ನಿಧನದಿಂದ ನಾವು ಶ್ರೇಷ್ಠ ನೃತ್ಯ ತಪಸ್ವಿನಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.