ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ನಲ್ಲಿ ತಮ್ಮದೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ನಾಲ್ವರು ವಿದ್ಯಾರ್ಥಿಗಳು ಅತ್ಯಾಚಾರ ಎಸಗಿದ್ದಾರೆ.
ಪುರುಷ ಸ್ನೇಹಿತನೊಡನೆ ಬೈಕ್ನಲ್ಲಿ ವಿದ್ಯಾರ್ಥಿನಿ ಶಾಲಾವಧಿ ಮುಗಿದ ನಂತರ ತೆರಳಿದ್ದರು. ಈ ವೇಳೆ ಮಾತನಾಡಬೇಕು ಎಂದು ಮೈದಾನವೊಂದಕ್ಕೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.
ನಂತರ ಉಣ್ಣೆಯ ಶಾಲು ತರುತ್ತೇನೆ ಎಂದು ಹೇಳಿ ಹೋದವನು ಐವರು ಸ್ನೇಹಿತರ ಜೊತೆ ವಾಪಾಸಾಗಿದ್ದಾನೆ. ಆಕೆಯ ಮೇಲೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮರುದಿನ ಬಾಲಕಿ ಮನೆಯವರಿಗೆ ಎಲ್ಲ ವಿಷಯವನ್ನು ಹೇಳಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಪೊಲೀಸರು ದೂರು ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ. ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಐದನೇ ವಿದ್ಯಾರ್ಥಿ ಅಪ್ರಾಪ್ತನಾದ ಕಾರಣ ಆತನನ್ನು ಶೆಲ್ಟರ್ ಹೋಮ್ನಲ್ಲಿ ಇರಿಸಲಾಗಿದೆ.