ಸಹಪಾಠಿಗೆ ಚಾಕು ಇರಿತ: ಬುಲ್ಡೋಜರ್ ನಿಂದ ಆರೋಪಿ ಮನೆ ಧ್ವಂಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉದಯ್‌ಪುರದಲ್ಲಿ ಸಹಪಾಠಿಗೆ ಚಾಕು ಇರಿದ ಪ್ರಕರಣದಲ್ಲಿ ಆರೋಪಿಯ ಮನೆಯನ್ನು ಅಧಿಕಾರಿಗಳು ಶನಿವಾರ ಬುಲ್ಡೋಜರ್ ನಿಂದ ಧ್ವಂಸ ಮಾಡಿದ್ದಾರೆ.

ಆರೋಪಿ ಹಾಗೂ ಆತನ ತಂದೆ ನೆಲೆಸಿದ್ದ ಮನೆ ಅಕ್ರಮವಾಗಿತ್ತು ಎಂದು ಉದಯ್‌ಪುರ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮನೆ ಕೆಡವುವ ಮೊದಲು ಆ ಮನೆಯಲ್ಲಿದ್ದ ಸರಕು ಸಾಮಾನುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಆರೋಪಿ ಹಾಗೂ ಕುಟುಂಬಸ್ಥರಿಗೆ ಅವಕಾಶ ನೀಡಿದ್ದರು.

ಕಟ್ಟಡ ಧ್ವಂಸಗೊಳಿಸುವ ವೇಳೆಯಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

ಉದಯಪುರ ಜಿಲ್ಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿ ತನ್ನ ಸಹಪಾಠಿಗೆ ಚಾಕು ಇರಿದಿದ್ದು, ಮಧುಬನ್ ಪ್ರದೇಶದಲ್ಲಿ ಕೋಮುಗಲಭೆಗೆ ಕಾರಣವಾಯಿತು. ಸದ್ಯ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಮುಂದುವರಿಸುತ್ತಿದ್ದಾರೆ.

ಈ ಘಟನೆ ಸಂಭವಿಸಿದ ನಂತರ ಮಧುಬನ್ ಪ್ರದೇಶದ ಹಲವಾರು ಹಿಂದು ಸಂಘಟನಾ ಸದಸ್ಯರು ಸೇರಿ ಪಕ್ಕದ ಗ್ಯಾರೇಜಿನಲ್ಲಿದ್ದ ಮೂರಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿದ್ದಾರೆ.

ಕೋಮುಗಲಭೆ ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ನಗರದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆಸದಂತೆ ನಿರ್ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!