ಕೇದಾರನಾಥ ಚಾರಣ ಮಾರ್ಗ ದುರಸ್ತಿ: ಮತ್ತೆ ಯಾತ್ರಾರ್ಥಿಗಳಿಗೆ ಓಪನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಹಾನಿಗೊಳಗಾಗಿದ್ದ ಕೇದಾರನಾಥ ಚಾರಣ ಮಾರ್ಗ ದುರಸ್ತಿಯಾಗಿದ್ದು, ಯಾತ್ರಾರ್ಥಿಗಳಿಗೆ ಮತ್ತೆ ತೆರೆಯಲಾಗಿದೆ.

ಬರೊಬ್ಬರಿ 15 ದಿನಗಳ ನಿರಂತರ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಯಾತ್ರಾರ್ಥಿಗಳಿಗೆ ಟ್ರೆಕಿಂಗ್ ಮಾರ್ಗವನ್ನು ಬಳಕೆಗೆ ತೆರೆಯಲಾಗಿದೆ. ಭೂಕುಸಿತದಿಂದ 29 ಸ್ಥಳಗಳಲ್ಲಿ ನಿರ್ಬಂಧಿಸಲಾಗಿದ್ದ 19 ಕಿಮೀ ಉದ್ದದ ಮಾರ್ಗವನ್ನು ಶನಿವಾರ ಪುನಃಸ್ಥಾಪಿಸಲಾಗಿದೆ ಎಂದು ಡೆಹ್ರಾಡೂನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 260 ಕಾರ್ಮಿಕರುಶ್ರಮಿಸಿ ಯಾತ್ರಾರ್ಥಿಗಳಿಗೆ ಮಾರ್ಗವನ್ನು ಸರಿಪಡಿಸಿದ್ದು, ಭದ್ರತಾ ಸಿಬ್ಬಂದಿ ಯಾತ್ರಾರ್ಥಿಗಳಿಗೆ ರಸ್ತೆ ದಾಟಲು ಸಹಾಯ ಮಾಡುತ್ತಿರುವ ಒಂದೆರಡು ಸ್ಥಳಗಳನ್ನು ಹೊರತುಪಡಿಸಿ ಬಹುತೇಕ ಮಾರ್ಗವನ್ನು ಈಗ ದುರಸ್ತಿ ಮಾಡಲಾಗಿದೆ ಎಂದು ಅವರು ಹೇಳಿದರು.

ಜುಲೈ 31 ರಂದು ಭಾರೀ ಮಳೆ ಸುರಿದ ನಂತರ ಈ ಮಾರ್ಗದಲ್ಲಿ ಸರಣಿ ಭೂಕುಸಿತಗಳು ಸಂಭವಿಸಿತ್ತು. ಅಂದು ಸಾವಿರಾರು ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!