ವೆಸ್ಟ್​ ಇಂಡೀಸ್​​ ವಿರುದ್ಧ ಕ್ಲೀನ್​ ಸ್ವೀಪ್: ಏಕದಿನ ರ್‍ಯಾಂಕಿಂಗ್​ ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ವೆಸ್ಟ್​ ಇಂಡೀಸ್​​ ವಿರುದ್ಧ ನಡೆದ ಸರಣಿಯಲ್ಲಿ ಕ್ಲೀನ್​ ಸ್ವೀಪ್ ಸಾಧನೆ ಮಾಡಿರುವ ಟೀಂ ಇಂಡಿಯಾ ಐಸಿಸಿ ಏಕದಿನ ರ್‍ಯಾಂಕಿಂಗ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. ಹಿರಿಯ ಆಟಗಾರರ ಅನುಪಸ್ಥಿತಿ ಮಧ್ಯೆ ಅದ್ಭುತ ಪ್ರದರ್ಶನ ನೀಡಿರುವ ಮೂರು ಪಂದ್ಯಗಳಲ್ಲಿ ಸಂಘಟಿತ ಹೋರಾಟದ ಬಲದಿಂದ 3-0 ಅಂತರದ ಜಯ ಸಾಧಿಸಿದೆ. ಈ ಮೂಲಕ 110 ಪಾಯಿಂಟ್​​ಗಳಿಕೆ ಮಾಡಿದೆ.

ಪಾಕಿಸ್ತಾನ 106 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ 128 ಅಂಕಗಳಿಕೆ ಮಾಡಿರುವ ನ್ಯೂಜಿಲ್ಯಾಂಡ್​ ಅಗ್ರ ಸ್ಥಾನ ಕಾಯ್ದುಕೊಂಡಿದ್ದು, ಇಂಗ್ಲೆಂಡ್​ 119 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ನಿನ್ನೆ ರಿಲೀಸ್ ಆಗಿದ್ದ ಪ್ಲೇಯರ್ಸ್​​​ಗಳ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್​ ಕೊಹ್ಲಿ ಒಂದೊಂದು ಸ್ಥಾನ ಕುಸಿತ ಕಂಡಿದ್ದರು. ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್​ 13ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!