Tuesday, September 30, 2025

Cleaning Tips |ಸ್ವಿಚ್‌ಬೋರ್ಡ್‌ ಕಪ್ಪಾಗಿ ಬಿಟ್ಟಿದೆಯಾ? ಕ್ಲೀನ್ ಮಾಡೋಕೆ ಈ ಸಿಂಪಲ್ ಟಿಪ್ಸ್ ಸಾಕು

ಮನೆಯನ್ನು ಸ್ವಚ್ಛಗೊಳಿಸುವಾಗ ಸಾಮಾನ್ಯವಾಗಿ ಮೇಲ್ನೋಟಕ್ಕೆ ಬರುವ ಪ್ರದೇಶಗಳಿಗೆ ಹೆಚ್ಚು ಗಮನ ನೀಡುತ್ತೇವೆ. ಆದರೆ ಪ್ರತಿದಿನ ಬಳಕೆಯಲ್ಲಿರುವ ಸಣ್ಣ ಐಟಂಗಳು, ಉದಾಹರಣೆಗೆ ಟಿವಿ ರಿಮೋಟ್, ಟ್ಯೂಬ್ ಲೈಟ್, ಬಲ್ಬ್, ಸ್ವಿಚ್‌ಬೋರ್ಡ್ ಮುಂತಾದವುಗಳನ್ನು ಮರೆತೇ ಬಿಡುತ್ತೇವೆ. ವಿಶೇಷವಾಗಿ ಬಿಳಿ ಬಣ್ಣದ ಸ್ವಿಚ್‌ಬೋರ್ಡ್‌ಗಳು ಬೇಗನೆ ಕೊಳಕಾಗುತ್ತವೆ, ಮತ್ತು ಅದರ ಮೇಲೆ ಬ್ಯಾಕ್ಟೀರಿಯಾ ಬೆಳೆದು ಆರೋಗ್ಯಕ್ಕೆ ಹಾನಿ ಮಾಡಬಹುದು. ಹೀಗಾಗಿ ಸ್ವಿಚ್‌ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಸುಲಭ ವಿಧಾನ ಇಲ್ಲಿದೆ.

  • ಆಲೂಗಡ್ಡೆ ಮತ್ತು ಉಪ್ಪು: ಆಲೂಗಡ್ಡೆಯನ್ನು ಅರ್ಧವಾಗಿ ಕತ್ತರಿಸಿ ಉಪ್ಪುಸಹಿತವಾಗಿ ಸ್ವಿಚ್‌ಬೋರ್ಡ್ ಮೇಲೆ ಉಜ್ಜಿಕೊಳ್ಳಿ. 10 ನಿಮಿಷದ ಬಳಿಕ ಒಣ ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಿ.
  • ಟೂತ್‌ಪೇಸ್ಟ್: ಬಿಳಿ ಟೂತ್‌ಪೇಸ್ಟ್ ಅನ್ನು ಸ್ವಿಚ್‌ಬೋರ್ಡ್ ಮೇಲೆ ಹಚ್ಚಿ, ಟೂತ್ ಬ್ರಷ್‌ನಿಂದ ಉಜ್ಜಿ, ನಂತರ ಒಣ ಬಟ್ಟೆಯಿಂದ ಒರೆಸಿ.
  • ನಿಂಬೆ ಮತ್ತು ಉಪ್ಪು: ನಿಂಬೆ ಅರ್ಧ ಹಣ್ಣು ಮೇಲೆ ಉಪ್ಪು ಹಾಕಿ ಸ್ವಿಚ್‌ಬೋರ್ಡ್‌ನ್ನು ಸ್ವಚ್ಛಗೊಳಿಸಿ.
  • ನೇಲ್ ಪೇಂಟ್ ರಿಮೂವರ್: ಹತ್ತಿ ಬಟ್ಟೆಯ ಮೇಲೆ ನೇಲ್ ಪೇಂಟ್ ರಿಮೂವರ್ ಹಾಕಿ ಸ್ವಿಚ್‌ಬೋರ್ಡ್‌ ಮೇಲೆ ಉಜ್ಜಿ, ನಂತರ ಒರೆಸಿ.
  • ಅಡುಗೆ ಸೋಡಾ: ಅಡುಗೆ ಸೋಡಾ ಹಾಗೂ ಸ್ವಲ್ಪ ನೀರನ್ನು ಬೆರೆಸಿ ದಪ್ಪ ಪೇಸ್ಟ್ ಮಾಡಿ ಬ್ರಷ್ ಮೂಲಕ ಹಚ್ಚಿ, 5 ನಿಮಿಷದ ನಂತರ ಸ್ವಚ್ಛಗೊಳಿಸಿ.

ಸುರಕ್ಷತಾ ಸಲಹೆಗಳು:

  • ಸ್ವಿಚ್‌ಬೋರ್ಡ್ ಸ್ವಚ್ಛಗೊಳಿಸುವ ಮೊದಲು ವಿದ್ಯುತ್ ಆಫ್ ಮಾಡುವುದು.
  • ಎಲ್ಲಾ ಸ್ವಿಚ್‌ಗಳನ್ನು ಆಫ್ ಮಾಡಿ.
  • ಕೈಗವಸುಗಳನ್ನು ಹಾಕಿ, ಮಕ್ಕಳನ್ನು ದೂರವಿಟ್ಟು ಕೆಲಸ ಮಾಡಿ.
  • ಸ್ವಿಚ್‌ಬೋರ್ಡ್‌ ಸಂಪೂರ್ಣ ಒಣಗಿದ ಮೇಲೆ ಮಾತ್ರ ವಿದ್ಯುತ್ ಆನ್ ಮಾಡಿ.