ಅವಳಿ ಗೋಪುರಗಳ ನೆಲಸಮ: ಭರದಿಂದ ಸಾಗಿದ ಅವಶೇಷಗಳನ್ನು ತೆಗೆಯುವ ಪ್ರಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೃಹತ್‌ ಕಟ್ಟಡಗಳು ನೆಲಸಮವಾದ ಬಳಿಕ ಈ ಪ್ರದೇಶದಲ್ಲಿ ಅವಶೇಷಗಳನ್ನು ತೆಗೆದುಹಾಕುವ ಕಾರ್ಯ ಭರದಿಂದ ಸಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸೂಪರ್ ಟೆಕ್ ಕಂಪನಿ ಅಕ್ರಮವಾಗಿ ನಿರ್ಮಿಸಿದ್ದ ಟವರ್ ಗಳನ್ನು ನಿನ್ನೆ ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಲಾಗಿತ್ತು. 100 ಮೀಟರ್‌ಗೂ ಹೆಚ್ಚು ಎತ್ತರದ ಕಟ್ಟಡಗಳು ಕುಸಿದ ಪರಿಣಾಮ ಧೂಳು, ಕಬ್ಬಿಣ, ಇಟ್ಟಿಗೆ ಸೇರಿದಂತೆ ಕಟ್ಟಡದಲ್ಲಿ ಅದೆಷ್ಟೋ ವಸ್ತುಗಳು ಆ ಪ್ರದೇಶವನ್ನ ಆವರಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ, ಸುತ್ತಮುತ್ತಲಿನ ಪ್ರದೇಶಗಳು ಮತ್ತು ರಸ್ತೆಗಳನ್ನು ನೀರು ಮತ್ತು ವಿವಿಧ ಉಪಕರಣಗಳಿಂದ ತಮ್ಮ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಹೇಳಿದರು. ಅಲ್ಲಿರುವ ಮರಗಳಿಗೂ ನೀರು ಹಾಯಿಸಲಾಗುತ್ತಿದೆ ಎಂದರು. ಕೆಡವಿದ ಕಾರಣ ಅಕ್ಕಪಕ್ಕದಲ್ಲಿ ಸಾಕಷ್ಟು ಧೂಳು ಶೇಖರಣೆಯಾಗಿದೆ ಎಂದ ಅವರು ಸ್ಥಳೀಯವಾಗಿ ವಿದ್ಯುತ್, ಅಡುಗೆ ಅನಿಲ ಪೂರೈಕೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಭದ್ರತೆ ದೃಷ್ಟಿಯಿಂದ ಈ ಪ್ರದೇಶದಲ್ಲಿ ಇನ್ನೂ ಪೊಲೀಸ್ ಬಂದೋಬಸ್ತ್ ಇದೆ. ನಿನ್ನೆ ರಾತ್ರಿ 7 ಗಂಟೆಯಿಂದ ಆ ಭಾಗದಲ್ಲಿದ್ದ ವಾಸವಿದ್ದವರಿಗೆ ಮರಳಿ ತಮ್ಮ ಮನೆ ತಲುಪಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ನಿನ್ನೆ ರಾತ್ರಿಯೇ ಬಹುತೇಕರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಕೆಲವರು ಇಂದು ಬೆಳಿಗ್ಗೆ ಹಿಂತಿರುಗಿದರು. ಅವಳಿ ಗೋಪುರದ ಬಳಿ ಸುಮಾರು 5,000 ಜನರು ವಾಸಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!