ನಗರಸಭಾ ಬಿಜೆಪಿ ಸದಸ್ಯರಿಂದ ಸ್ವಚ್ಛತಾ ಶ್ರಮದಾನ

ದಿಗಂತ ವರದಿ ಮಡಿಕೇರಿ:

ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರು ಭಾನುವಾರ ನಗರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು.
ನಗರದ ಮೈಸೂರು ರಸ್ತೆಯ ‘ಬಿಗ್ ಕಪ್’ ಮುಂಭಾಗದಿಂದ ಮಡಿಕೇರಿ ನಗರಕ್ಕೆ ಬರುವ ರಸ್ತೆಯ ಎರಡೂ ಬದಿಗಳ ಕಸವನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ಶ್ರಮದಾನದಲ್ಲಿ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಎಸ್.ಸಿ.ಸತೀಶ್, ಶ್ವೇತಾ ಪ್ರಶಾಂತ್, ಸಬಿತಾ ಚಂದ್ರಶೇಖರ್, ಕಲಾವತಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!