ಮಸೀದಿಗಳ ಸ್ಪೀಕರ್ ತೆರವುಗೊಳಿಸಿ ,ಹೈಕೋರ್ಟ್ ಆದೇಶ ಪಾಲಿಸಿ: ಹಿಂದೂ ಜಾಗೃತಿ ಸೇನೆ

ಹೊಸದಿಗಂತ ವರದಿ,ಕಲಬುರಗಿ:

ನಗರದ ಮಸೀದಿಗಳ ಮೇಲಿರುವಂತಹ ಅನಧಿಕೃತ ಸ್ಪೀಕರಗಳನ್ನು ತೆರವುಗೊಳಿಸಿ, ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲಿ ಎಂದು ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಜಿಲ್ಲಾಧಿಕಾರಿ, ಗೆ ಮನವಿ ಸಲ್ಲಿಸಿ ಮಾತನಾಡಿ, ಮುಸ್ಲಿಂ ಪ್ರಾರ್ಥನಾ ಸ್ಥಳಗಳಲ್ಲಿ ಹಾಗೂ ಮಸೀದಿಗಳ ಮಿನಾರುಗಳ ಮೇಲೆ 75d ಡಿಸಿಬಲ್ ಗಿಂತ ಹೆಚ್ಚು ಸಾಮರ್ಥ್ಯದ ಧ್ವನಿವರ್ಧಕಗಳನ್ನು ಹಗಲು ರಾತ್ರಿ ಬಳಕೆ ಮಾಡಲಾಗುತ್ತಿದ್ದು ಅವುಗಳ ಸಾಮರ್ಥ್ಯ ಬಹುತೇಕ 130 ಆಗಿದೆ.ಇದು ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದರು.

ವೃದ್ಧರು ಮಕ್ಕಳು ಹಾಗೂ ಮಾನಸಿಕ ರೋಗಿಗಳಿಗೆ ಸಾಕಷ್ಟು ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗಿದೆ ಇಂಥಹ ಧ್ವನಿವರ್ಧಕಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅವಶ್ಯಕತೆ ಇದ್ದರೆ ಅವುಗಳನ್ನು ವಶಪಡಿಸಿಕೊಳ್ಳಬೇಕೆಂದು ಹೇಳಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶವು ಜಾರಿಗೊಳಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ಡೋಲೆ. ಜಿಲ್ಲಾ ಉಪಾಧ್ಯಕ್ಷ ಸುನಿಲ್ ಶಿರ್ಕೆ. ನಗರ್ ಅಧ್ಯಕ್ಷ ದಶರಥ ಇಂಗೋಳೇ. ಉತ್ತರ ವಲಯ ಅಧ್ಯಕ್ಷ ಮಾದೇವ ಕೋಟನೂರ್. ರಾಜು ಕಮಲಾಪುರೆ. ಪವನ್ ಕದಂ. ಶರಣು ತಳವಾರ. ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!