Tuesday, June 28, 2022

Latest Posts

ಉತ್ತರ ಪ್ರದೇಶದ ಅಲಿಘರ್, ಫರೂಕಾಬಾದ್, ಸುಲ್ತಾನ್‌ಪುರ ಸಹಿತ 12 ಜಿಲ್ಲೆಗಳಿಗೆ ಮರುನಾಮಕರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅದಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದೀಗ ಮತ್ತೆ ಜಿಲ್ಲೆಗಳು ಮತ್ತು ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಶುರುಮಾಡಿದ್ದಾರೆ.
ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಹಲವು ಜಿಲ್ಲೆಗಳು ಮತ್ತು ನಿಲ್ದಾಣಗಳ ಹೆಸರು ಬದಲಾಯಿಸಿದ್ದ ಯೋಗಿ, ಈ ಅವಧಿಯಲ್ಲಿ ಮತ್ತೊಮ್ಮೆ ನಗರಗಳ ಹೆಸರನ್ನು ಬದಲಾಯಿಸಲು ತಯಾರಿ ಆರಂಭಿಸಿದ್ದಾರೆ.
ಈ ಬಾರಿ ಕನಿಷ್ಠ 12 ಜಿಲ್ಲೆಗಳ ಹೆಸರನ್ನು ಬದಲಾಯಿಸಬಹುದು. ಈ ಪೈಕಿ 6 ಹೆಸರಿಗೆ ಮುದ್ರೆ ಬಿದ್ದಿದೆ. ವರದಿಗಳ ಪ್ರಕಾರ, ಇವುಗಳಲ್ಲಿ ಅಲಿಘರ್, ಫರೂಕಾಬಾದ್, ಸುಲ್ತಾನ್‌ಪುರ, ಬದೌನ್, ಫಿರೋಜಾಬಾದ್ ಮತ್ತು ಷಹಜಹಾನ್‌ಪುರ ಸೇರಿವೆ.
. ಹಿಂದಿನ ಸಿಎಂ ಯೋಗಿ ಅವರ ಅಧಿಕಾರಾವಧಿಯಲ್ಲಿಯೂ ಸಹ, ಮುಘಲ್ಸರಾಯ್ ರೈಲು ನಿಲ್ದಾಣಕ್ಕೆ ಪಂ. ದೀನದಯಾಳ್ ಉಪಾಧ್ಯಾಯ ಹೆಸರಿಡಲಾಗಿದೆ, ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಲಾಯಿತು, ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು.
ಮಾಧ್ಯಮಗಳು ಹೇಳುವಂತೆಈ ಜಿಲ್ಲೆಗಳ ಮರುನಾಮಕರಣಕ್ಕೆ ಬಹುತೇಕ ಅನುಮೋದನೆ ನೀಡಲಾಗಿದೆ. ಅವರ ಹೊಸ ಹೆಸರುಗಳು ಶೀಘ್ರದಲ್ಲೇ ಹೊರಬರಬಹುದು.
ಇನ್ನು ಫರೂಕಾಬಾದ್ ಸಂಸದ ಮುಖೇಶ್ ರಜಪೂತ್ ಪ್ರಕಾರ, ಫರೂಕಾಬಾದ್ ಜಿಲ್ಲೆ ದ್ರೌಪದಿಯ ತಂದೆ ದ್ರುಪದನ ಪಾಂಚಾಲ್ ರಾಜ್ಯದ ರಾಜಧಾನಿಯಾಗಿತ್ತು, ಆದ್ದರಿಂದ ಇದನ್ನು ಪಾಂಚಾಲ್ ನಗರ ಎಂದು ಹೆಸರಿಸಬೇಕು. ಆದರೆ ಸುಲ್ತಾನ್‌ಪುರ ಹೆಸರನ್ನು ಕುಶಭವನಪುರ ಎಂದು ಬದಲಾಯಿಸುವ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿದೆ. ಸುಲ್ತಾನಪುರದಲ್ಲಿ ರಾಮನ ಮಗ ಕುಶ ನೆಲೆಸಿದನು ಎಂದು ನಂಬಲಾಗಿದೆ. ಅದೇ ವೇಳೆ ಬದೌನ್ ಅನ್ನು ವೇದಮವು ಎಂದು, ಫಿರೋಜಾಬಾದ್ ಅನ್ನು ಚಂದ್ರನಗರ ಎಂದು ಮತ್ತು ಷಹಜಾನ್‌ಪುರವನ್ನು ಶಾಜಿಪುರ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವೂ ಹೋಗಿದೆ.
ಅಲಿಗಢ್ ಹೆಸರನ್ನು ಹರಿಘರ್ ಎಂದು ಬದಲಾಯಿಸಬೇಕು ಎಂಬುದು ಹಿಂದೂ ಸಂಘಟನೆಗಳ ಆಗ್ರಹವಾಗಿದೆ. ಕೆಲವು ಸಂಘಟನೆಗಳು ಅಲಿಗಢ್ ಹೆಸರನ್ನು ಆರ್ಯಗಢ ಎಂದು ಬದಲಾಯಿಸಲು ಬಯಸುತ್ತಿವೆ.
ಈ ಜಿಲ್ಲೆಗಳ ಹೊರತಾಗಿ ಇನ್ನೂ ಹಲವು ನಗರಗಳ ಹೆಸರು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಅಜಂಗಢವನ್ನು ಆರ್ಯಂಗಢ್, ಮೈನ್‌ಪುರಿಯನ್ನು ಮಾಯನ್‌ಪುರಿ, ಸಂಭಾಲ್‌ನ ಕಲ್ಕಿ ನಗರ ಅಥವಾ ಪೃಥ್ವಿರಾಜ್ ನಗರ, ದೇವ್‌ಬಂದ್‌ ಅನ್ನು ದೇವವೃಂದಪುರ, ಗಾಜಿಪುರವನ್ನು ಗಾಡೀಪುರಿ ಮತ್ತು ಆಗ್ರಾವನ್ನು ಅಗ್ರವನ ಮಾಡಲು ಹಲವು ಸಂಘಟನೆಗಳು ಒತ್ತಾಯಿಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss