ಹೊಸದಿಗಂತ ವರದಿ ಪುತ್ತೂರು :
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿ ದೇವಳದ ಜಾಗದಲ್ಲಿದ್ದ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಫೆ.4ರ ತಡ ರಾತ್ರಿ ಬಿಜೆಪಿ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರ ಮನೆಯನ್ನೂ ತೆರವು ಮಾಡಲಾಗಿದೆ.
ಮನೆ ತೆರವುಗೊಳಿಸುವ ವಿಚಾರ ನನ್ನ ಗಮನಕ್ಕೆ ಬಂದೇ ಇರಲಿಲ್ಲ. ತಡರಾತ್ರಿ ಸುಮಾರು 2.30ರ ವೇಳೆಗೆ ಜೆಸಿಬಿ ಯಂತ್ರದ ಮೂಲಕ ಮನೆಯನ್ನು ನೆಲಸಮ ಮಾಡಲಾಗಿದೆ. ಮನೆ ತೆರವು ಸಂದರ್ಭ ನಾಯಿಮರಿಗಳು ಮೃತಪಟ್ಟಿದೆ ಎಂದು ರಾಜೇಶ್ ಬನ್ನೂರು ತಿಳಿಸಿದ್ದಾರೆ.
ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬದಲು ತಡರಾತ್ರಿ ಮನೆಯನ್ನು ನೆಲಸಮ ಮಾಡಿರುವ ಕೃತ್ಯ ನಡೆದಿದೆ. ಈ ಕುರಿತು ನಾನು ಪೊಲೀಸ್ ದೂರನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.