ಗ್ಯಾಸ್‌ ಕಟರ್‌ ಬಳಕೆ ಮಾಡಿ ಎಟಿಎಂನಿಂದ 18 ಲಕ್ಷ ರೂ. ಕದ್ದ ಚಾಲಾಕಿ ಕಳ್ಳರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗ್ಯಾಸ್ ಕಟರ್ ಬಳಸಿ ಕಳ್ಳರು ಎಟಿಎಂನಿಂದ 18 ಲಕ್ಷ ರೂ. ಕದ್ದೊಯ್ದಿರುವ ಘಟನೆ ಕಲಬುಗರಿಯ ರಾಮನಗರದ ಬಳಿ ಇರುವ ಎಸ್‌ಬಿಐ ಎಟಿಎಂಯಲ್ಲಿ ನಡೆದಿದೆ.

ಬುಧವಾರ ಸಂಜೆ 3 ಗಂಟೆ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ಎಟಿಎಂಗೆ ಹಣ ಹಾಕಿ ಹೋಗಿದ್ದರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಎಟಿಎಂನಲ್ಲಿ ಸೆಕ್ಯೂರಿಟಿ ಇಲ್ಲದನ್ನು ಗಮನಿಸಿದ ಖದೀಮರು ಕನ್ನ ಹಾಕಿದ್ದಾರೆ.

ಕಳ್ಳರು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ಲಾಕ್ ಸ್ಪ್ರೇ ಮಾಡಿ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಮೆಷಿನ್ ಒಡೆದಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 18 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಖದೀಮರು ಐ20 ಕಾರಿನಲ್ಲಿ ಬಂದು ಎಟಿಎಂ ದರೋಡೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಎಟಿಎಂನ ಬಳಿ ಐ20 ಕಾರು ನಿಂತಿರುವ ದೃಶ್ಯವು ಎಟಿಎಂ ಪಕ್ಕದಲ್ಲಿರೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!