ಪಿಎಫ್ಐ ಸಂಘಟನೆ ಯ ಚಲನ ವಲನದ ಬಗ್ಗೆ ತೀವ್ರ ನಿಗಾ: ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ವರದಿ, ಶಿರಸಿ :

ಪಿಎಫ್ಐ ಸಂಘಟನೆ ಬ್ಯಾನ್ ಮಾಡಲಾಗಿದ್ದರೂ ಆ ಸಂಘಟನೆಯ ಚಲನ ವಲನದ ಬಗ್ಗೆ ತೀವ್ರ ನಿಗಾ ಇಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರ ಅವರು, ಈಗಾಗಲೇ ದೇಶದ್ರೋಹಿ ಸಂಘಟನೆ ಪಿಎಫ್ಐ ಬ್ಯಾನ್ ಮಾಡಲಾಗಿದೆ. ಆದರೆ ಆ ಸಂಘಟನೆ ಇನ್ನೊಂದು ರೂಪದಲ್ಲಿ ಸಮಾಜದ ಮುಂದೆ ಬರಬಹುದು. ಹಿಂದೆ ಸಿಮಿ ಸಂಘಟನೆ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾನ್ ಮಾಡಿದಾಗ ಅದು ಪಿಎಫ್ಐ ರೂಪದಲ್ಲಿ ಬಂದಿತ್ತು. ಹೀಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದವರು ಎಸ್ಡಿಪಿಐ ಜತೆ ನಿಟಕವರ್ತಿ ಆಗಿರುವುದು ಸರಕಾರದ ಗಮನಕ್ಕೆ ಬಂದಿದೆ. ದೇಶ ದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡವರ ಬಗ್ಗೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೋಲಿಸ ಇಲಾಖೆಯಲ್ಲಿ ಸಿಬ್ಬಂದಿಯ ಅಂತರ್ಜಿಲ್ಲಾ ವರ್ಗಾವಣೆ ಈಗಾಗಲೇ ರದ್ದಾಗಿದೆ .ಈ ಬಗ್ಗೆ ಪುನರ್ಶಿಲನೆ ಮಾಡುವಂತೆ ಒತ್ತಾಯವಿದೆ.ಅನಿವಾರ್ಯ ಪರಿಸ್ಥಿತಿ ಯಲ್ಲಿ ವರ್ಗಾವಣೆ ಗೆ ಅವಕಾಶ ಕ್ಕೆ ಸಂಬಂಧಿಸಿ ವಿಷಯ ಚರ್ಚೆಯಲ್ಲಿದೆ ಎಂದರು.
ಪರೇಶ್ ಮೆಸ್ತಾ ತಂದೆ ಕಮಲಾಕರ ಮೇಸ್ತ ಪುನರ್ ತನಿಖೆ ಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆ ನಡೆಯುತ್ತಿದೆ. ಪರೇಶ್ ಮೆಸ್ತ ಸಾವು ಸಹಜ ಸಾವಲ್ಲ ಕೊಲೆಯೆಂದು ಅವರ ತಂದೆ ಹಾಗೂ ಸಾರ್ವಜನಿಕರ ಅಭಿಪ್ರಾಯ ವಾಗಿದೆ. ಈ ಪ್ರಕರಣದಲ್ಲಿ ಯಾವತರಹದ ರಾಜಕೀಯ ಇಲ್ಲ. ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಸರ್ಕಾರದಿಂದ ಆಗುತ್ತಿದೆ ಎಂದರು.
ಶಿರಸಿಯಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪನೆ ಕುರಿತು ಸರ್ಕಾರದಲ್ಲಿ ಪ್ರಸ್ತಾವ ಈಗಾಗಲೇ ಇದೆ . ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಕೂಡಾ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದು ಅವಶ್ಯಕತೆಗೆ ಅನುಗುಣವಾಗಿ ಸಂಚಾರ ಪೊಲೀಸ್ ಠಾಣೆ ಆಗುವ ಸಾಧ್ಯತೆ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!