ಚಂದ್ರನ ಸನಿಹ ಚಂದ್ರಯಾನ-3: ಬಾಹ್ಯಾಕಾಶ ನೌಕೆಗೆ ನಾಳೆ ಮಹತ್ವದ ದಿನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-3 ನೌಕೆ ಇನ್ನೇನು ಚಂದ್ರನ ಸಮೀಪಕ್ಕೆ ಬಂದೇ ಬಿಟ್ಟಿದೆ. ಈ ಹೊತ್ತಲ್ಲಿ ಮತ್ತೊಂದು ಮಹತ್ವದ ಹಂತಕ್ಕೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ.

ಚಂದ್ರನೂರಿಗೆ ತೆರಳುವ ನಿಟ್ಟಿನಲ್ಲಿ ಬಾಹ್ಯಾಕಾಶ ನೌಕೆಗೆ ನಾಳೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಈಗಾಗಲೇ ಚಂದ್ರಯಾನ ತನ್ನ ಪ್ರಯಾಣ ಮೂರನೇ ಎರಡರಷ್ಟು ಪ್ರಯಾಣ ಮುಗಿಸಿದ್ದಾಗಿದೆ. ಚಂದ್ರನಿಂದ 40 ಸಾವಿರ ಕಿಲೋಮೀಟರ್‌ ದೂರದಲ್ಲಿದೆ. ಆಗಸ್ಟ್‌ 5 ರಂದು ಚಂದ್ರನ ಕಕ್ಷಗೆ ನೌಕೆ ಸೇರ್ಪಡೆಯಾಗಬೇಕು. ಬಾಹ್ಯಾಕಾಶ ನೌಕೆ ಚಂದ್ರಯ ಕಕ್ಷಗೆ ಸೇರುವ ಪ್ರಯತ್ನವನ್ನು ಮಾಡಲಿದೆ. ಇದರಲ್ಲಿ ಯಶಸ್ವಿಯಾದಲ್ಲಿ, ಈ ಪರೀಕ್ಷೆಯಲ್ಲಿ ಗೆದ್ದಂತೆ.

ಇಸ್ರೋದ ಬಾಹ್ಯಾಕಾಶ ನೌಕೆ ಚಂದ್ರನ ಸುಮಾರು 3ನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಇದೀಗ ಚಂದ್ರನ ಕಕ್ಷೆಗೆ ಅಧಿಕೃತವಾಗಿ ‘ಚಂದ್ರಯಾನ-3’ ನೌಕೆಯನ್ನು ಸೇರಿಸುವ ಕೆಲಸ ಬಾಕಿ ಇದ್ದು, ನಾಳೆ ಅಂದರೆ ಆಗಸ್ಟ್ 5ರ ಸಂಜೆ 7 ಗಂಟೆಗೆ ಈ ಕಾರ್ಯಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಇಸ್ರೋ ಸಂಸ್ಥೆ ಈ ಮಹತ್ವದ ಮಾಹಿತಿಯನ್ನ ಅಧಿಕೃತವಾಗಿ ಇಡೀ ಜಗತ್ತಿಗೆ ತಿಳಿಸಿದೆ. ಈ ಮೂಲಕ ಪ್ರಪಂಚವೇ ಮಹತ್ವದ ಹಂತಕ್ಕೆ ಉಸಿರುವ ಬಿಗಿಹಿಡಿದು ಕಾಯುತ್ತಿದೆ.

ಇಸ್ರೋ ನೀಡಿರುವ ಮಾಹಿತಿ ಪ್ರಕಾರ, ಲೂನಾರ್ ಟ್ರಾನ್ಸ್‌ಫರ್‌ ಟ್ರಾಜೆಕ್ಟರಿ ಪಥದಲ್ಲಿ ‘ಚಂದ್ರಯಾನ-3’ ನೌಕೆ ಸಾಗುತ್ತಿದೆ. ಕಳೆದ ಸೋಮವಾರ ಮಧ್ಯರಾತ್ರಿ ಭೂ ಕಕ್ಷೆಯಿಂದ ಬೇರ್ಪಟ್ಟಿದ್ದ ನೌಕೆ ಚಂದ್ರನ ಕಡೆ ಸಾಗಿದೆ. ಹಾಗೆ ಚಂದ್ರಯಾನ-3 ನೌಕೆ ಚಂದ್ರನ ಸಮೀಪಕ್ಕೆ ಆಗಮಿಸುತ್ತಿದ್ದಂತೆ ‘ಲೂನಾರ್‌-ಆರ್ಬಿಟ್‌ ಇನ್‌ರ್ಸಶನ್‌’ ಅಂದರೆ ಎಲ್‌ಓಐ ಕಾರ್ಯ ಶುರು ಆಗುತ್ತೆ. ಆಗಸ್ಟ್‌ 5ಕ್ಕೆ ಎಲ್‌ಓಐ ಮಾಡಲು ಯೋಜಿಸಿದ್ದೇವೆ ಎಂದು ಇಸ್ರೋ ಈ ಮೊದಲೇ ಮಾಹಿತಿ ನೀಡಿತ್ತು. ಅದ್ರಂತೆ ನಾಳೆ ಸಂಜೆ 7 ಗಂಟೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

ಆಗಸ್ಟ್ 6 ರಂದು ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಯಾನವನ್ನು ಚಂದ್ರನ ಎರಡನೇ ಕಕ್ಷೆಗೆ ಸೇರಿಸಲಾಗುತ್ತದೆ, ಮೂರನೇ ಕಕ್ಷೆಗೆ ಇಳಿಸುವ ಕಾರ್ಯ ಆಗಸ್ಟ್ 9 ರಂದು ಮಧ್ಯಾಹ್ನ 2.45 ರ ಸುಮಾರಿಗೆ ನಡೆಯಲಿದೆ. ನಾಲ್ಕನೇ ಚಂದ್ರನ ಕಕ್ಷಗೆ ಇಳಿಸುವ ಇಂಜೆಕ್ಷನ್ ಆಗಸ್ಟ್ 14 ರಂದು ಮಧ್ಯಾಹ್ನ 12 ರ ಸುಮಾರಿಗೆ ಮತ್ತು ಐದನೇ ಚಂದ್ರನ ಕಕ್ಷೆಯ ಇಂಜೆಕ್ಷನ್ ಆಗಸ್ಟ್ 16 ರಂದು ಬೆಳಿಗ್ಗೆ 8.30 ರ ಸುಮಾರಿಗೆ ನಡೆಯಲಿದೆ. ಆಗಸ್ಟ್ 17 ರಂದು, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳ್ಳುತ್ತದೆ.

ಅಗಸ್ಟ್‌ 18 ರಿಂದ 20ರವರೆಗೆ ಈ ನೌಕೆಯ ಈ ಆರ್ಬಿಟಿಂಗ್‌ ನಡೆಯಲಿದೆ. ಅಂದರೆ, ಲ್ಯಾಂಡರ್‌ ಇಳಿಯುವ ಪ್ರಕ್ರಿಯೆ. ಹಂತ ಹಂತವಾಗಿ ಚಂದ್ರನ ಕಕ್ಷೆಯನ್ನು ಕಡಿಮೆ ಮಾಡುವ ಕೆಲಸ ನಡೆಯಲಿದೆ. 100* 30 ಕಿ.ಮೀ ಅಂತರದಲ್ಲಿ ಲ್ಯಾಂಡರ್‌ ಇಳಿಯಲಿದೆ. ಆಗಸ್ಟ್‌ 23ರಂದು ಸಂಜೆ 5.47ರ ವೇಳೆಗೆ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!