ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ತ್ರಿವೇಣಿ ಉಪನದಿ ಜಲಾವೃತಗೊಂಡಿದೆ.
ನಿನ್ನೆಯಿಂದ ಆರಂಭವಾದ ಭಾರೀ ಮಳೆಗೆ ಭಾಗಮಂಡಲ ಜಿಲ್ಲೆಯ ತ್ರಿವೇಣಿ ನದಿ ಸಂಗಮ ಜಲಾವೃತವಾಗಿದ್ದು, ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯ ಪ್ರವೇಶ ಹಂತಕ್ಕೆ ನೀರು ಬಂದಿದೆ.
ಭಾಗಮಂಡಲ ಸಂಪೂರ್ಣ ಜಲಾವೃತಗೊಂಡಿದೆ. ಕೆಳಭಾಗದ ನಾಪೋಕ್ಲು ಹಾಗೂ ಮಡಿಕೇರಿ ರಸ್ತೆಗಳು ಜಲಾವೃತವಾಗಿವೆ. ಮಳೆ, ಗಾಳಿಯಿಂದ ಈ ಭಾಗದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಮತ್ತೊಂದೆಡೆ ನಾಪೋಕ್ಲು- ಮೂರ್ನಾಡು ರಸ್ತೆಯೂ ಜಲಾವೃತವಾಗಿದ್ದು, ಪಾರಾಣೆಯಿಂದ ವೀರಾಜಪೇಟೆ ಹೋಗುವ ಮುಖ್ಯ ರಸ್ತೆಯ ಬೆಳ್ಳುಮಾಡು ಸೇತುವೆ ಸಂಪರ್ಕ ಕಡಿತಗೊಂಡಿದೆ.