ಭಾರತೀಯ ಟೆನಿಸ್​ಗೆ ವಿದಾಯ ಹೇಳಿದ ಕನ್ನಡಿಗ ರೋಹನ್ ಬೋಪಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಭಾರತೀಯ ಟೆನಿಸ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ತಂಡವು 7-5, 6-2 ರಿಂದ ಸೋಲನ್ನು ಎದುರಿಸಿತು. ಬೆನ್ನಲ್ಲೇ ರೋಹನ್ ಬೋಪಣ್ಣ ಇದು ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಎಂದಿದ್ದಾರೆ.

Paris 2024 Olympics tennis: Sumit Nagal, Rohan Bopanna-N Sriram Balaji lose  first round; India's campaign ends

ಬೋಪಣ್ಣ 22 ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಿವೃತ್ತಿ ಬಗ್ಗೆ ಮಾತನಾಡಿರುವ ಅವರು, ಇದು ನನ್ನ ವೃತ್ತಿಜೀವನದ ಕೊನೆಯ ಪಂದ್ಯಾವಳಿ. ಆಟಗಾರನಾಗಿ ನಾನು ಎಲ್ಲಿಗೆ ತಲುಪಿದ್ದೇನೆ ಅಂತಾ ಅರ್ಥ ಮಾಡಿಕೊಂಡಿದ್ದೇನೆ. 20 ವರ್ಷಗಳಿಗೂ ಹೆಚ್ಚು ಕಾಲ ಟೆನಿಸ್​​ನಲ್ಲಿ ಉನ್ನತ ಮಟ್ಟ ತಲುಪಿದ್ದೆ. ನನ್ನ ಐತಿಹಾಸಿಕ ವೃತ್ತಿಜೀವನದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.

Rohan Bopanna Announces Retirement From India Colours After Poor Show At  Paris Olympics 2024 | Times Now

ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ರೋಹನ್ ಬೋಪಣ್ಣ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲ್ಲ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ತಂಡ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್​ ತಲುಪಿತ್ತು. ಈ ಬಾರಿ ಶ್ರೀರಾಮ್ ಬಾಲಾಜಿ ಜತೆಗೂಡಿ ಒಲಿಂಪಿಕ್ ಪದಕ ಗೆಲ್ಲುವ ಕನಸನ್ನು ಕಂಡಿದ್ದರು.

Rohan Bopanna gets ready for last Davis Cup hurrah | Tennis News -  Hindustan Times

ರೋಹನ್ ಬೋಪಣ್ಣ ತಮ್ಮ ಐತಿಹಾಸಿಕ ಟೆನಿಸ್ ವೃತ್ತಿಜೀವನದಲ್ಲಿ 6 ಬಾರಿ ಡಬಲ್ಸ್ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್ ಆಗಿದ್ದಾರೆ. ಎರಡು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಹೆಗ್ಗಳಿಕೆಯೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!