October 21, 2026
Wednesday, October 21, 2026
spot_img

ಮೈಸೂರು ಪೇಟ ಧರಿಸಿ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ ಡಿಕೆಶಿ : ದಸರಾ ಮೆರವಣಿಗೆಗೆ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಂದಿಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಶ್ವವಿಖ್ಯಾತ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.

ಮೈಸೂರು ಪೇಟ ತೊಟ್ಟು ಆಗಮಿಸಿದ್ದ ಸಿಎಂ ಅವರು ತಮಗಾಗಿ ತಂದಿದ್ದ ಹಾರವನ್ನು ಹಾಕಿಸಿಕೊಳ್ಳದೇ ನಂದಿಧ್ವಜಕ್ಕೆ ಹಾಕುವಂತೆ ಸೂಚನೆ ನೀಡಿದರು. ತದನಂತರ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ದಸರಾ ಹಬ್ಬದ ನೆನಪಿಗಾಗಿ ನೀಡಲಾಯಿತು.

ಇನ್ನೂ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನ್ನ ಮರೆಯಲಾಗದ ದಿನ ಇವತ್ತು. ತಾಯಿ ಚಾಮುಂಡಿ ಆಶೀರ್ವಾದದಿಂದ ನನಗೆ ಅವಕಾಶ ಸಿಕ್ಕಿದೆ, ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ. ಮಳೆ, ಬೆಳೆ ಚೆನ್ನಾಗಿ ಆಗಬೇಕು ಅಂತಾ ಚಾಮುಂಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು. ಲಕ್ಷಾಂತರ ಜನ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಲ್ಲವೂ ಒಳಿತೇ ಆಗಲಿ ಎಂದಿದ್ದಾರೆ.

ಎಲ್ಲ ದ್ವೇಷಗಳು ದೂರವಾಗಿ ಸಾಮರಸ್ಯ ತುಂಬಲಿ. ರಾಜ್ಯದ ಪ್ರತೀ ವ್ಯವಸ್ಥೆಯಲ್ಲಿಯೂ ಇರುವ ಅನ್ಯಾಯ ದೂರವಾಗಲಿದೆ. ಯುವಕರ ಭವಿಷ್ಯ ಉಜ್ವಲವಾಗಲಿ ಎಂದು ದೇವರನ್ನು ಬೇಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

Must Read