ಸಿಎಂ ಅಶೋಕ್ ಗೆಹ್ಲೋಟ್​ ‘ಜಾದೂಗಾರ’, ಕೆಂಪು ಡೈರಿಯಲ್ಲಿದೆ ಭ್ರಷ್ಟಾಚಾರದ ಕರ್ಮಕಾಂಡ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಎಂ ಅಶೋಕ್ ಗೆಹ್ಲೋಟ್​ ಜಾದೂಗಾರ, ರಾಜಸ್ಥಾನದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತವು ಭೂಮಿ, ಅರಣ್ಯ, ನೀರನ್ನು ಮಾರಾಟ ಮಾಡಿದೆ.ಇದರ ಎಲ್ಲ ಕರ್ಮಕಾಂಡಗಳು ಅವರ ಪಕ್ಷದವರೇ ಬಿಡುಗಡೆ ಮಾಡಿರುವ ಕೆಂಪು ಡೈರಿಯಲ್ಲಿ ನಮೂದಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಬರಾನ್‌ನಲ್ಲಿ ಮಂಗಳವಾರ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಲಭೆಕೋರರು ಮತ್ತು ಕ್ರಿಮಿನಲ್‌ಗಳು ರಾಜ್ಯವನ್ನು ಆಳುತ್ತಿದ್ದಾರೆ. ಕಾಂಗ್ರೆಸ್​ ರಾಜ್ಯದ ಜನರನ್ನು ಲೂಟಿ ಮಾಡಿದೆ. ನವೆಂಬರ್​ 23 ರಂದು ನಡೆಯುವ ಮತದಾನದಲ್ಲಿ ರಾಜ್ಯದ ಜನರು ಕಾಂಗ್ರೆಸ್​ ದುರಾಡಳಿತಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ ಹಿಂದುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹಬ್ಬಗಳ ವೇಳೆ ಗಲಭೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಹಲವು ಹಿಂದುಗಳು ಬಲಿಯಾಗುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ನಾಯಕರು ಸಾರ್ವಜನಿಕರ ಹಿತದ ಬಗ್ಗೆ ತಲೆಕೆಡಿಸಿಕೊಳ್ಳದೇ ಭ್ರಷ್ಟಾಚಾರ ನಡೆಸಿ ಅವರ ಮತ್ತು ಜೇಬು ತುಂಬಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಗಲಭೆಕೋರರು, ಅಪರಾಧಿಗಳಿಗೆ ಕೆಂಪು ಹಾಸಿನ ಸ್ವಾಗತ ಇರುತ್ತದೆ ಎಂದು ಆರೋಪಿಸಿದರು.

ಇದೀಗ ಸಮಯಬಂದಿದೆ ರಾಜಸ್ಥಾನದ ಮತದಾರರು ಕಾಂಗ್ರೆಸ್​ನ ಕೆಟ್ಟ ಆಡಳಿತಕ್ಕೆ ವಿದಾಯ ಹೇಳುವ ನಿರ್ಧಾರ ಮಾಡಲು. ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಜನತೆ ವಿದಾಯ ಹೇಳಲಿದ್ದಾರೆ. ದೇಶ ವಿರೋಧಿ ಅಂಶಗಳಿಂದಲೇ ಇಲ್ಲಿನ ಸರ್ಕಾರ ಕುಖ್ಯಾತಿಯಾಗಿತ್ತು. ಜನರಲ್ಲಿ ಭಯ ಮತ್ತು ದ್ವೇಷವನ್ನೇ ಬಿತ್ತಿತ್ತು ಎಂದು ಟೀಕಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!