ಹೊಸದಿಗಂತ ವರದಿ, ವಿಜಯನಗರ:
ಪಿತೃ ಪಕ್ಷದಲ್ಲಿ ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಣೆ ಮಾಡಿರುವುದು ಅಶುಭದ ಲಕ್ಷಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದು ಸನಾತನ ಧರ್ಮದ ಪ್ರಕಾರ ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಮೃತರ ಆತ್ಮಕ್ಕೆ ಶಾಂತಿ ಕೋರಿ ಪಿಂಡ ಪ್ರದಾನ ಮಾಡುವುದು ಸಂಪ್ರದಾಯ. ಆದರೆ, ಪಿತೃಪಕ್ಷದಲ್ಲೇ ಬಾಗಿನ ಅರ್ಪಣೆ ಮಾಡಿದ್ದರಿಂದ ತಾಯಿ ತುಂಗಭದ್ರೆ ಮುನಿಸಿಕೊಳ್ಳುತ್ತಾಳೆ. ಭ್ರಷ್ಟಾಚಾರದಲ್ಲಿ ತೋಡಗಿರುವ ಕಾಂಗ್ರೆಸ್ ಸರ್ಕಾರದ ಅವನತಿಗೆ ತುಂಗಭದ್ರೆ ಕಾರಣವಾಗ್ತಾಳೆ ಎಂದು ಎಚ್ಚರಿಸಿದರು.