Tuesday, March 28, 2023

Latest Posts

ನಾಳೆ ಸಿಎಂ ಬೊಮ್ಮಾಯಿ ಬಜೆಟ್, ಹೇಗಿರಲಿದೆ ಲೆಕ್ಕಾಚಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ.
ಫೆ.17ರಂದು ಸಿಎಂ ಬೊಮ್ಮಾಯಿ ತಮ್ಮ ಆಡಳಿತದ ಕಡೆಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಪೂರ್ಣಪ್ರಮಾಣದ ಹಾಗೂ ಹೆಚ್ಚುವರಿ ಆದಾಯದ ಬಜೆಟ್ ಇದಾಗಿರಲಿದ್ದು, ಚುನಾವಣಾ ಲೆಕ್ಕಾಚಾರವೂ ಇದೆ. ಈ ಬಾರಿ ಯಾವುದೇ ತೆರಿಗೆ ಹೇರದೇ ಹೊರೆ ಇಲ್ಲದ ಬಜೆಟ್ ಮಂಡನೆಗೆ ಸಿಎಂ ಸಜ್ಜಾಗಿದ್ದಾರೆ.

ಸಿಎಂ ಬೊಮ್ಮಾಯಿ ಅಧಿಕಾರಾವಧಿಯ ಎರಡನೇ ಬಜೆಟ್ ಇದಾಗಿದೆ. ನಾಳೆ ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ ಆರಂಭವಾಗಲಿದೆ. ಈಗಾಗಲೇ ಸಿಎಂ ಬಜೆಟ್ ಪೂರ್ವತಯಾರಿ ನಡೆಸಿದ್ದಾರೆ. ಈ ಹಿಂದೆ 2.7 ಲಕ್ಷ ಕೋಟಿ ರೂ ಬಜೆಟ್ ಮಂಡನೆ ಮಾಡಿದ್ದ ಸಿಎಂ ಈ ಬಾರಿ ಮೂರು ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮಂಡನೆ ಮಾಡಲು ತಯಾರಾಗಿದ್ದಾರೆ.

ಚುನಾವಣಾ ವರ್ಷವಾಗಿರುವುದರಿಂದ ಸಿಎಂ ಬೊಮ್ಮಾಯಿ ಈ ಬಾರಿ ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸಹಕಾರಿಯಾಗುವಂತಹ ಬಜೆಟ್ ಮಂಡನೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!