ಸಿಎಂ ಬದಲಾವಣೆ ವಿಚಾರ‌: ಅಖಾಡಕ್ಕೆ ಇಳಿದ ಮತ್ತೋರ್ವ ಸ್ವಾಮೀಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸಿಎಂ ಸ್ಥಾನ ಹಾಗೂ 3 ಡಿಸಿಎಂ ಸ್ಥಾನಗಳ ಬಗ್ಗೆ ಚರ್ಚೆ ಜೋರಾಗುತ್ತಿದ್ದು, ಇದೀಗ ರಂಭಾಪುರಿ ಪೀಠದ ಜಗದ್ಗುರುಗಳು ಈ ಕುರಿತು ಪ್ರತಿಕ್ರಿಯಿಸಿದ್ದು, ‘ಒಕ್ಕಲಿಗ ಸಮುದಾಯದ ಚಂದ್ರಶೇಖರಶ್ರೀ ಸಿಎಂ ಸಮ್ಮುಖದಲ್ಲೇ ಬದಲಾವಣೆ ಬಗ್ಗೆ ಮಾತನಾಡಿದ್ದು ವಿಪರ್ಯಾಸ ಎಂದಿದ್ದಾರೆ.

ಇಂದು(ಶನಿವಾರ) ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ಬದಲಾವಣೆ ಸಮಯ ಬಂದ್ರೆ ‘ಕೈ’ ಹೈಕಮಾಂಡ್ ಉದಾಸೀನತೆ ತೋರದೇ ವೀರಶೈವ ಲಿಂಗಾಯತ ನಾಯಕರಿಗೆ ನೀಡಬೇಕು ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಲಿಂಗಾಯಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು. ಒಂದು ವೇಳೆ ಸದ್ಯಕ್ಕೆ ಕೊಡಲಾಗದಿದ್ದರೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾದರೂ ಪರಿಗಣಿಸಬೇಕು. ಯಾವುದೇ ಧರ್ಮ ಪೀಠದವರು ರಾಜಕೀಯ ಬಗ್ಗೆ ಮಾತಾಡೋದು ಸರಿಯಲ್ಲ ಎನ್ನುವುದು ಗೊತ್ತು. ಆದ್ರೆ ಅನಿವಾರ್ಯವಾಗಿ ಹೇಳುವ ಪರಿಸ್ಥಿತಿ ಬಂದಿರುವುದರಿಂದ ಧರ್ಮ ಪೀಠ ಮಾತಾಡಬೇಕಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದಲ್ಲಿ ಕೆಲವರು ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಅಂತಾ ಹೇಳ್ತಿದ್ದಾರೆ. ಇನ್ನು ಕೆಲವರು ಮೂವರನ್ನು ಉಪಮುಖ್ಯಮಂತ್ರಿಗಳಾಗಿ ಮಾಡಿ ಅಂತಿದಾರೆ. ಎಲ್ಲಾ ಸಮುದಾಯ ಜನರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕಾಗಿತ್ತು. ಆದರೆ, ಅವರವರಲ್ಲೆ ಕಿತ್ತಾಡಿಕೊಂಡು ಹೋಗ್ತಿರೋದು ನೋವುಂಟು ಮಾಡಿದೆ. ಆ ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಅವರಿಗೆ ಬಿಟ್ಟಿದೆ. ಇದನ್ನು ನಿಯಂತ್ರಣ ಮಾಡಬೇಕಾದ್ರೆ ಕಾಂಗ್ರೆಸ್ ಹೈಕಮಾಂಡ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಹಗರಣಗಳು ಹೊರ ಬರ್ತಿವೆ. ವಿರೋಧ ಪಕ್ಷ ಅದನ್ನ ಇಟ್ಟುಕೊಂಡು ಹೋರಾಟ ನಡೆಯುತ್ತಿವೆ. ಬೆಲೆ ಏರಿಕೆ ಕೊಲೆ ಸುಲಿಗೆ ಹೆಚ್ಚಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ ಕೆಲವೆ ಕೆಲವು ಸಮುದಾಯದ ಜನರ ತುಷ್ಟಿಕರಣ ಮಾಡಬಾರದು. ಎಲ್ಲಾ ಸಮುದಾಯ ಜನರನ್ನು ಜೊತೆಗೆ ಕರೆದೊಯ್ಯಬೇಕು. ಆದರೆ, ರಾಜ್ಯದಲ್ಲಿ ಅದು ಆಗ್ತಿಲ್ಲ. ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣ ಇಲ್ಲ ಅಂತಾ ಹೇಳಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಯೋಚನೆ ಮಾಡಬೇಕು. ಜನರಿಗೆ ದುಡಿಮೆ ಮಾಡಿಸಬೇಕು, ಹೊರತು ಸೋಮಾರಿತನ ಮಾಡಿಸಬಾರದು. ಕಾಂಗ್ರೆಸ್ ತಮ್ಮ ಪಕ್ಷದ ಜನಪ್ರಿಯತೆಗೆ ಈ ರೀತಿಯ ಅಗ್ಗದ ಪ್ರಚಾರ ಮಾಡಿ ಗ್ಯಾರೆಂಟಿಗಳಿಂದ ಹೊಡೆತ ತಿನ್ನುತ್ತಿದೆ ಎಂದು ಹೇಳಿದರು.

ಸದ್ಯ ಮುಖ್ಯಮಂತ್ರಿ ಹಾಗೂ ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಪರವಾಗಿರುವ ಸಚಿವರು 3 ಜನ ಡಿಸಿಎಂ ಆಗಬೇಕು ಅಂತಾ ಹೇಳಿದ್ದರು. ಒಕ್ಕಲಿಗ ಸಮುದಾಯದ ಸ್ವಾಮೀಜಿ ಡಿ.ಕೆ.ಶಿವಕುಮಾರ್ ಅವರನ್ನ ಮಾಡಬೇಕು ಅಂತಾ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಇರುವ ವೇದಿಕೆಯಲ್ಲೆ ಹೇಳಿರೊದು ವಿಪರ್ಯಾಸ. ಹೈಕಮಾಂಡ್ ಉದಾಸಿನ ತೆಗೆದುಕೊಳ್ಳದೆ ಆ ಕಾರ್ಯ ಮಾಡಬಾರದು. ಹೈ ಕಮಾಂಡ್ ಬದಲಾವಣೆ ಮಾಡುವ ಸಂಧರ್ಭ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ವಿರಶೈವ ಸಮಾಜ ಬಹಳ ಕೊಡುಗೆ ಕೊಟ್ಟಿದೆ. ಈ ಹಿಂದೆ ವಿರೇಂದ್ರ ಪಾಟೀಲ್ ಅವರನ್ನ ಸಿಎಂ ಸ್ಥಾನದಿಂದ ಅರ್ಧದಲ್ಲೆ ಇಳಿಸಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯರ ದುರಾಡಳಿತದಿಂದ ಜನ ಬೆಸತ್ತು ಕಾಂಗ್ರೆಸ್ ಅಧಿಕಾರ ಕೊಟ್ಟಿದ್ದಾರೆ ಎಂದರು.

ಮುಖ್ಯಮಂತ್ರಿ ಸ್ಥಾನ ಲಿಂಗಾಯಿತರಿಗೆ ಕೊಡೊದಕ್ಕೆ ಆಗದಿದ್ದರೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾದ್ರು ಪರಿಗಣಿಸಬೇಕು. ಧರ್ಮ ಪೀಠದವರು ರಾಜಕೀಯ ಬಗ್ಗೆ ಮಾತಾಡೋದು ಸರಿಯಲ್ಲ. ಆದ್ರೆ ಅನಿವಾರ್ಯವಾಗಿ ಹೇಳುವ ಪರಿಸ್ಥಿತಿ ಬಂದಾಗ ಇವಾಗ ಧರ್ಮ ಪೀಠ ಮಾತಾಡಬೇಕಾಗಿದೆ. ಹೈಕಮಾಂಡ್ ಇದನ್ನ ಬಗೆಹರಿಸಬೇಕು. ಇಲ್ಲದೆ ಹೊದ್ರೆ ಅವರವರಲ್ಲೆ ಕಿತ್ತಾಡಿಕೊಂಡು ಅಭಿವೃದ್ಧಿ ಹಿನ್ನಡೆ ಆಗುತ್ತೆ ಅಂತಾ ಆತಂಕ ಕಾಡ್ತಿದೆ. ಕಾಂಗ್ರೆಸ್ ಒಳ್ಳೆ ಆಡಳಿತ ಕೋಡಬೇಕು ಎಂದರೆ ಯೋಗ್ಯರಿದ್ದರೆ ಅವರನ್ನೆ ಮುಂದುವರೆಸಿ ಇಲ್ಲ ಅಂದರೆ ಬೇರೆಯವರಿಗೆ ನೋಡಲಿ.ಕೆಲವೇ ಸಮುದಾಯದ ಜನರಿಗೆ ತುಷ್ಟಿಕರಣ ಮಾಡದೆ ಬದಲಾವಣೆ ವಿಚಾರ ಬಂದಾಗ ವೀರಶೈವ ಲಿಂಗಾಯತರಿಗೆ ಆಧ್ಯತೆ ಕೊಡಬೇಕು. ಒಂದು ವೇಳೆ ಸಿಎಂ ಕೊಡಲಾಗದಿದ್ರೆ ಡಿಸಿಎಂ ಆದ್ರೂ ವೀರಶೈವರಿಗೆ ಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!