ದೆಹಲಿಗೆ ಹೋಗೋ ಮುನ್ನ ಸಿಎಂ, ಡಿಸಿಎಂ ಮೀಟಿಂಗ್: ಸ್ಥಾನ ಭರ್ತಿ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಈ ಹಿನ್ನಲೆಯಲ್ಲಿ ಇಬ್ಬರು ಇಂದು ಸಿಎಂ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ಬಾರಿ ದೆಹಲಿ ಪ್ರವಾಸದಲ್ಲಿ ರಾಜ್ಯದಲ್ಲಿ ಖಾಲಿ‌ ಇರುವ ವಿಧಾನ ಪರಿಷತ್ ಸ್ಥಾನದ ಭರ್ತಿ ಸಂಬಂಧ ಹೈಕಮಾಂಡ್  ಜೊತೆ ಮಾತುಕತೆ ನಡೆಯಲಿದೆ. ಈ ಕುರಿತು ಇಬ್ಬರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಿಎಂ ಡಿಸಿಎಂ ಹಾಗೂ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಿದ್ದು, ರಾಜಣ್ಣ ಹನಿಟ್ರ್ಯಾಪ್‌ ಹಾಗೂ ರಾಜೇಂದ್ರ ಸುಪಾರಿ ಕಿಲ್ಲಿಂಗ್ ಆರೋಪದ ಬಗ್ಗೆ ಕೂಡ ಚರ್ಚ ನಡೆಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!