ದಿಗಂತ ವರದಿ ಬಾಗಲಕೋಟೆ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಆಲಮಟ್ಟಿ ಆಣೆಕಟ್ಟು ಆಗಮಿಸಿ, ಕೃಷ್ಣೆ ನದಿಗೆ ಬಾಗಿನ ಅರ್ಪಸಿದರು.
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ದಿಂದ ಆಯೋಜನೆ ಮಾಡಿರುವ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಮಾಡಿದರು.ಸಿಎಂ ಹಾಗೂ ಡಿಸಿಎಂ ಸೇರಿದಂತೆ ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆಯ ಉಸ್ತುವಾರಿ ಸಚಿವರು,ಶಾಸಕರು ಸೇರಿದಂತೆ ಇತರ ಮುಖಂಡರು ಭಾಗವಹಿಸಿ,ಬಾಗಿನ ಅರ್ಪಸಿದರು.
ಈ ಮೊದಲು ಗಂಗಾ ಪೂಜೆ ಹಿನ್ನಲೆ ಅರ್ಚಕರು ಪೂಜೆ ಸಲ್ಲಿಸಿದರು.ಕೆ ಬಿ ಜಿ ಎನ ಎಲ್ ದಿಂದ ನಿರ್ಮಾಣ ಮಾಡಿರುವ ವೇದಿಕೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ನಿಂತು ಕೃಷ್ಣೆಗೆ ಬಾಗಿನ ಸಮರ್ಪಣೆ ಮಾಡಿ,ಪ್ರಾರ್ಥನೆ ಸಲ್ಲಿಸಿದರು.