ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ನ.25 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ‘ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ, ‘ಗೋಧನ್ ಸ್ಕೀಮ್’ ಅಡಿಯಲ್ಲಿ ಬೆರಣಿಯ ಬೆಲೆಯನ್ನು ಕೆ.ಜಿಗೆ ₹2 ನಿಗದಿಪಡಿಸಲಾಗುವುದು, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನ ಅಂಗೀಕಾರ, ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿ ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ನೀಡಲಾಗುವುದು, ಪ್ರಾಕೃತಿಕ ವಿಕೋಪದಿಂದಾದ ಹಾನಿಗೆ ₹15 ಲಕ್ಷ ವಿಮೆ ಸೌಲಭ್ಯ ನೀಡಲಾಗುವುದು’ ಎಂದು ಭರವಸೆ ನೀಡಿದರು.
1.05 ಕೋಟಿ ಕುಟುಂಬಗಳಿಗೆ ₹500ಕ್ಕೆ ಅಡುಗೆ ಸಿಲಿಂಡರ್ ಅನ್ನು ನೀಡಲಾಗುವುದು, ವಾರ್ಷಿಕವಾಗಿ ಕುಟುಂಬದ ಮಹಿಳಾ ಯಜಮಾನಿಗೆ ₹10,000 ಗೌರವಧನವನ್ನು ಕಂತುಗಳಾಗಿ ನೀಡಲಾಗುವುದು. ಇದನ್ನು ಪ್ರಿಯಾಂಕಾ ಗಾಧಿ ವಾದ್ರಾ ಅವರು ಈಗಾಗಲೇ ಜುಂಜುನುದಲ್ಲಿ ನಡೆಸಿದ ಸಾರ್ವಜನಿಕ ರ್‍ಯಾಲಿಯಲ್ಲಿ ಘೋಷಿಸಿದ್ದಾರೆ ಎಂದರು.