ಸಿಎಂ ಆಯ್ತು ಇದೀಗ ಡಿಸಿಎಂ ಸ್ಥಾನಕ್ಕೆ ಫುಲ್ ಡಿಮ್ಯಾಂಡ್! ನಾನೂ ಡಿಸಿಎಂ ಆಗ್ಬೇಕು ಎಂದ ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಸಿಎಂ ಯಾರು ಎಂದು ನಿರ್ಧಾರವಾಗೋಕೆ ಐದು ದಿನಗಳು ಬೇಕಾಗಿದೆ, ಕಡೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.

ಇದೀಗ ಡಿಸಿಎಂ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ನನಗೆ ಡಿಸಿಎಂ ಸ್ಥಾನ ಬೇಕೇ ಬೇಕು ಎಂದು ಪಟ್ಟುಹಿಡಿದಿದ್ದಾರೆ.

ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದೆ ಹಾಗಾಗಿ ಇದನ್ನು ಪರಿಗಣಿಸಿ ನನ್ನನ್ನು ಡಿಸಿಎಂ ಮಾಡಬೇಕು, ಒಬ್ಬರು ಮಾತ್ರ ಅಧಿಕಾರದಲ್ಲಿ ಇದ್ರೆ ಸಾಕು ಎನ್ನುವುದು ಸೂಕ್ತ ಅಲ್ಲ. ಎಲ್ಲರ ನಾಯಕತ್ವ ಶ್ರಮದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!