ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗುವುದು ಮೋದಿಯವರಿಂದ ಮಾತ್ರ. ಸಂಪುಟದ ಯಾವುದೇ ಸಚಿವರಿಗೆ ಆಹ್ವಾನ ನೀಡಿಲ್ಲ. ರಾಮಮಂದಿರಕ್ಕಾಗಿ ಹೋರಾಟ ನಡೆಸುತ್ತಿದ್ದ ಅಡ್ವಾಣಿ ಅವರಿಗೆ ಬರಬೇಡಿ ಎಂದರು. ಮಠಗಳೇ ಅಪೂರ್ಣಗೊಂಡಿರುವ ದೇವಸ್ಥಾನವನ್ನು ತೆರೆಯುವುದರ ವಿರುದ್ಧ ದನಿ ಎತ್ತಿದವು. ಇದು ಚುನಾವಣೆಯ ಆರಂಭ. ಹೀಗಾಗಿ ಹೋಗುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ರಾಮಮಂದಿರ ತೆರೆಯುವ ಬಗ್ಗೆ ನಮಗೂ ಸಂತಸವಿದೆ, ನಾವೂ ರಾಮನ ಭಕ್ತರು, ಆದರೆ ಚುನಾವಣೆಗೆ ಸಂಬಂಧಿಸಿದಂತೆ ಈ ರೀತಿ ಮಾಡುವುದು ತಪ್ಪು, ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಒಂದೇ ದೇವರು ಮತ್ತು ಒಂದೇ ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ರಾಮಮಂದಿರ ಉದ್ಘಾಟನೆಗೆ ರಾಜ್ಯ ಸಚಿವ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅವಮಾನವೇ? ಕೇಂದ್ರದಲ್ಲಿ ರಜೆ ಘೋಷಿಸಿ ದೇಶಕ್ಕೆ ರಜೆ ನೀಡಿ. ಅಪರೂಪಕ್ಕೆ ಯುಪಿ ಸಿಎಂರನ್ನ ಪಕ್ಕಕ್ಕೆ ಕರೆದುಕೊಳ್ತಾರೆ. ಅಮಿತ್ ಶಾ ಕೂಡ ಇಲ್ಲ. ಕಾರ್ಯಕ್ರಮ ಎಲ್ಲ ಮೋದಿಯವರದೇ ದೊಡ್ಡ ದೊಡ್ಡ ಫೋಟೊಗಳು, ರಾಮನದ್ದು ಚಿಕ್ಕ ಫೋಟೊಗಳು. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯವರಿಗೆ ಜನ ಉತ್ತರ ಕೊಡುವ ದಿನ ಬರುತ್ತದೆ.