July 15, 2026
Wednesday, July 15, 2026
spot_img

ರಾಜ್ಯದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಿ ಸಿಎಂ ಆದೇಶ, ಯಾರಿಗೆ ಯಾವ ಜಿಲ್ಲೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದೆ. ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಸಿಎಂ ಡಿ.ಕೆ. ಶಿವಕುಮಾರ್‌ ಸಂಪುಟದ ಪ್ರಮುಖ ಸಚಿವರಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದ್ದು, ಡಿಸಿಎಂ ಡಾ. ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಹಾಗೂ ಯುವ ನಾಯಕರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಮುಖ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಲುವಾಗಿ ಸಿಎಂ ಡಿ.ಕೆ ಶಿವಕುಮಾರ್​ ಉಸ್ತುವಾರಿಗಳನ್ನು ನೇಮಿಸಿದ್ದಾರೆ. ಪ್ರತಿ ಸಚಿವರು ತಮಗೆ ನೀಡಲಾದ ಜಿಲ್ಲೆಗಳಲ್ಲಿ ಸಮಸ್ಯೆಗಳನ್ನು ಗುರುತಿಸಿ, ಸರ್ಕಾರಕ್ಕೆ ವರದಿ ಮಾಡುವ ಮತ್ತು ಪರಿಹಾರ ಕಂಡುಹಿಡಿಯುವ ಜವಾಬ್ದಾರಿ ಹೊಂದುತ್ತಾರೆ.

ಯಾರಿಗೆ ಯಾವ ಜಿಲ್ಲೆ?

ಡಾ. ಜಿ. ಪರಮೇಶ್ವರ – ತುಮಕೂರು& ಚಿತ್ರದುರ್ಗ
ಕೃಷ್ಣಭೈರೇಗೌಡ – ಬೆಂಗಳೂರು ನಗರ & ಹಾಸನ
ರಾಮಲಿಂಗಾರೆಡ್ಡಿ- ಬೆಂಗಳೂರು ದಕ್ಷಿಣ & ಮಂಡ್ಯ
ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ & ವಿಜಯನಗರ
ಡಾ. ಯತೀಂದ್ರ ಸಿದ್ದರಾಮಯ್ಯ – ಮೈಸೂರು & ಚಾಮರಾಜನಗರ
ಯು.ಟಿ. ಖಾದರ್ – ದಕ್ಷಿಣ ಕನ್ನಡ, ಉತ್ತರ ಕನ್ನಡ & ಉಡುಪಿ
ಎಂ.ಬಿ. ಪಾಟೀಲ್ – ವಿಜಯಪುರ & ಬಾಗಲಕೋಟೆ
ಪ್ರಿಯಾಂಕ್ ಖರ್ಗೆ – ಕಲಬುರಗಿ & ಯಾದಗಿರಿ
ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ & ಹಾವೇರಿ
ಕೆ.ಜೆ. ಜಾರ್ಜ್ – ಚಿಕ್ಕಮಗಳೂರು & ದಾವಣಗೆರೆ
ಈಶ್ವರ ಖಂಡ್ರೆ – ಬೀದರ್ & ಗದಗ
ಭೈರತಿ ಸುರೇಶ್ – ಕೋಲಾರ & ಚಿಕ್ಕಬಳ್ಳಾಪುರ
ಡಾ. ಶರಣಪ್ರಕಾಶ್ ಪಾಟೀಲ್ – ರಾಯಚೂರು & ಕೊಪ್ಪಳ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !