ಸಿಎಂ ಪಂಚಮಸಾಲಿ 2ಎ ಮೀಸಲಾತಿ ಪರ ಇದ್ದಾರೆ: ಸಚಿವ ಸಿ.ಸಿ. ಪಾಟೀಲ

ಹೊಸದಿಗಂತ ವರದಿ, ವಿಜಯಪುರ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ 2ಎ ಮೀಸಲಾತಿ ಪರವಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮನೆ ಮುಂದೆ ಧರಣಿ ಮಾಡುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಪ್ರತಿಭಟನೆ ಕೈಬಿಡಬೇಕು. ಈಗಾಗಲೇ ನಾನು ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದುಳಿದ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. 2ಎ ಮೀಸಲಾತಿ ವಿಚಾರ ಕುರಿತಂತೆ ಮನವಿ ಸಲ್ಲಿಸಿ ಚರ್ಚೆ ನಡೆಸಿದ್ದೇವೆ ಎಂದರು.

ವಿನಾಕಾರಣ ಪ್ರತಿಭಟನೆ ಮಾಡೋರು ಅಗ್ನಿಪಥ್ ಗೆ ನೇಮಕ ಆಗಲ್ಲ. ಪ್ರಧಾನಿ ಮೋದಿ ಅವರ ಸರ್ಕಾರದ ಮೇಲೆ ಗೂಬೆಕೂರಿಸಲು ಕೃತ್ಯ ಮಾಡಲಾಗುತ್ತಿದೆ. ‌45 ವಯಸ್ಸಿನವ ಪ್ರತಿಭಟನೆ ಮಾಡಿದರೆ ಅವನೇನು ಅಗ್ನಿಪಥ್ ಗೆ ಆಯ್ಕೆಯಾಗ್ತಾನಾ ? ಇನ್ನೂ ನಮ್ಮಲ್ಲಿಯು ಕೆಲವರಿಗೆ ಬ್ಯಾರಿಕೇಡ್ ಹಾರೋದು ರೂಢಿಯಾಗಿದೆ. ನಾ ಮುಂದು, ತಾ ಮುಂದು ಎಂದು ಬ್ಯಾರಿಕೇಡ್ ಹಾರ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!