ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ.
ಈ ಹಿಂದೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿದಾಗ ರಾಜ್ಯ ೨೩೬ ತಾಲೂಕುಗಳ ಪೈಕಿ 161 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 34 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿತ್ತು. ಒಟ್ಟಾರೆ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.
ಇದೀಗ 22 ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು, 11 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 11 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಬರಪೀಡಿತ ನೂತನ ತಾಲೂಕುಗಳು
ಚಾಮರಾಜನಗರ
ಕೃಷ್ಣರಾಜನಗರ
ಯಳಂದೂರು
ಬೆಳಗಾವಿ
ಖಾನಾಪುರ
ಮುಂಡರಗಿ
ಬ್ಯಾಡಗಿ
ಹಾನಗಲ್
ಶಿಗ್ಗಾವಿ
ಕಲಘಟಗಿ
ಅಳ್ನಾವರ
ಅಣ್ಣಿಗೇರಿ
ಆಲೂರು
ಅರಸೀಕೆರೆ
ಹಾಸನ
ಮೂಡಿಗೆರೆ
ತರೀಕೆರೆ
ಪೊನ್ನಂಪೇಟೆ
ಹೆಬ್ರಿ
ಸಿದ್ದಾಪುರ.