ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಯಾವ ಲಿಸ್ಟ್ ಕೊಟ್ಟಿದ್ದೇನೋ ಅದನ್ನು ಮಾತ್ರ ಮಾಡಿ ಎಂದಿರುವ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಇದು ನನ್ನ ಮಗನ ವಿಡಿಯೋ ವರ್ಗಾವಣೆ ಬಗ್ಗೆ ಅಲ್ಲ, ಒಂದು ವೇಳೆ ಅದು ವರ್ಗಾವಣೆ ವಿಡಿಯೋ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ..ʻನನ್ನ ಮಗ ಮಾತಾಡಿದ್ದು ವರ್ಗಾವಣೆ ಬಗ್ಗೆ ಅಲ್ಲ, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ವರ್ಗಾವಣೆ ದಂದೆ ಮಾಡಿಲ್ಲ. ಈ ದಂಧೆ ಮಾಡಿದ್ದೆ ಆದಲ್ಲಿ ರಾಜಕೀಯ ನಿವೃತ್ತಿಯಾಗುವೆʼ ಎಂದರು.
ನಾಲ್ಕೈದು ಮಾಡಿ ಎಂದರೆ ಅದು ವರ್ಗಾವಣೆಯಾ ಎಂದು ಪ್ರಶ್ನಿಸಿದ ಸಿಎಂ, ಅದು ಸಿಎಸ್‌ಆರ್ ಲಿಸ್ಟ್. ಸಿಎಸ್‌ಆರ್ ಫಂಡ್ನಿಂದ ಶಾಲೆ ಕಟ್ಟಡಗಳನ್ನು ರಿಪೇರಿ ಮಾಡಿಸಲಾಗುತ್ತಿದ್ದು, ಈ ಬಗ್ಗೆ ಯತೀಂದ್ರ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿವೆ ಎಂದರು.