ಹಳೆ ಗೆಳೆತನ ನೆನಪು ಮಾಡಿಕೊಂಡು ಹೋದ ಸಿಎಂ ಸಿದ್ದರಾಮಯ್ಯ ಕ್ಷಮೆಯಾಕೇ ಕೇಳಲಿಲ್ಲ: ಸಿ.ಟಿ.ರವಿ

ಹೊಸದಿಗಂತ ವರದಿ,ಮೈಸೂರು:

ಲೋಕಸಭೆ ಚುನಾವಣೆಯಲ್ಲಿ ಹಳೆ ಗೆಳೆತನ ನೆನಪು ಮಾಡಿಕೊಂಡು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್‌ರವರ ಮನೆಗೆ ಹೋದ ಸಿಎಂ ಸಿದ್ದರಾಮಯ್ಯ, ವಿ.ಶ್ರೀನಿವಾಸ್ ಪ್ರಸಾದ್‌ರನ್ನು ಸಚಿವ ಸ್ಥಾನದಿಂದ ತೆಗೆದಕ್ಕೆ ಯಾಕೇ ಅವರಲ್ಲಿ ಕ್ಷಮೆಯನ್ನು ಕೇಳಲಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನಿಸಿದರು.

ಭಾನುವಾರ ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಆಯೋಜಿಸಲಾಗಿದ್ದ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದ ವಿಜಯಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡಲಿಲ್ಲ ಎಂಬ ಕಾರಣಕ್ಕೆ ಸಚಿವ ಸ್ಥಾನದಿಂದ ವಿ.ಶ್ರೀನಿವಾಸ್‌ಪ್ರಸಾದ್‌ರನ್ನು ತೆಗೆದು ಹಾಕಿದ ಸಿದ್ದರಾಮಯ್ಯ, ಡಾ.ಹೆಚ್.ಸಿ.ಮಹದೇವಪ್ಪನವರ ಮಾತನ್ನು ಕೇಳಿಕೊಂಡು ವಿ.ಶ್ರೀನಿವಾಸ್‌ಪ್ರಸಾದ್‌ರನ್ನು ಕಡೆಗಣಿಸಿ, ದೂರ ಮಾಡಿದರು.

ಆದರೆ ಈಗ ಲೋಕಸಭೆ ಚುನಾವಣೆ ಎದುರಾಗಿರುವ ಕಾರಣ ಹಳೆಗೆಳೆತನ ನೆನಪಾಗಿ ವಿ.ಶ್ರೀನಿವಾಸ್‌ಪ್ರಸಾದ್‌ರ ಮನೆಗೆ ಹೋಗಿದ್ದಾರೆ. ಆದರೆ ಸಚಿವ ಸ್ಥಾನದಿಂದ ತೆಗೆದಕ್ಕೆ ಕಾರಣ ನೀಡಿ, ಅವರಲ್ಲಿ ಕ್ಷಮೆಯನ್ನು ಕೇಳಿದ್ದೀರಾ ಎಂದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ರ‍್ಥಿಯ ಜಾತಿಯನ್ನು ಪ್ರಚಾರ ಸಭೆಗಳಲ್ಲಿ ಸಿಎಂ ಸಿದ್ದರಾಮಯ್ಯನವರು ಉಲ್ಲೇಖಿಸಿದ್ದಾರೆ. ಆದರೆ ಒಕ್ಕಲಿಗ ಸಮುದಾಯವರು ಮೈಸೂರಿನ ಮಹಾರಾಜರ ಪರವಾಗಿ ಈ ಹಿಂದಿನಿಂದಲೂ ನಿಂತಿದ್ದಾರೆ. ಈಗಲೂ ಇದ್ದಾರೆ. ಆದರೆ ಟಿಪ್ಪು ಪರವಾಗಿರುವವರ ಜೊತೆ ನಿಂತವರಲ್ಲ. ಇದು ಜಾತಿ ಉಳಿಸುವ ಚುನಾವಣೆಯಲ್ಲ, ದೇಶವನ್ನು ಉಳಿಸುವ ಚುನಾವಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.

ಭೀಮನ ಭಾರತ (ಅಂಬೇಡ್ಕರ್ ಭಾರತ) ಮತ್ತಷ್ಟು ಬಲಿಷ್ಠವಾಗಲು, ಭಾರತ ಬಡತನ ಮುಕ್ತ ರಾಷ್ಟçವಾಗಲು, ರ‍್ಥಿಕವಾಗಿ ಸದೃಢವಾಗಿ, ವಿಶ್ವಗುರುವಾಗಲು ಮತ್ತೊಮ್ಮೆ ಮೋದಿ ರ‍್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!