April 15, 2026
Wednesday, April 15, 2026
spot_img

ಪ್ರಧಾನಿ ಮೋದಿ ಎದುರು ಬೇಡಿಕೆಗಳ ಪಟ್ಟಿಯನ್ನಿಟ್ಟ ಸಿಎಂ ಸಿದ್ದರಾಮಯ್ಯ, ಏನಿದೆ ಅದರಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆದಿಚುಂಚನಗಿರಿ ಮಠಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈ ಸಂಬಂಧ ಬೆಂಗಳೂರಿನ ಎಚ್‌ಎಎಲ್‌ಗೆ ಪಿಎಂ ಮೊದಲು ಭೇಟಿ ನೀಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಬೇಡಿಕೆಗಳ ಚೀಟಿಯನ್ನು ಪ್ರಧಾನಿಗೆ ನೀಡಿದ್ದಾರೆ.

ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತಾದ 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಯಾವೆಲ್ಲ ಮನವಿಗಳು?

ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ: 1,123 ಎಕರೆ ಭೂಮಿ ನೀಡಿದ್ದರೂ ಅನುಷ್ಠಾನಗೊಳ್ಳದ ಯೋಜನೆ ಪುನರುಜ್ಜೀವನ ನೀಡುವಂತೆ ಮನವಿ

ಬೆಂಗಳೂರು-ಮೈಸೂರು ವಿಭಾಗವನ್ನು ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಸೇರಿಸಲು ಕೋರಿಕೆ.

ಜಲ ಜೀವನ್ ಮಿಷನ್‌ಗೆ ಸಂಬಂಧಿಸಿದಂತೆ ಕೇಂದ್ರದಿಂದ ಬರಬೇಕಾದ ₹17,554 ಕೋಟಿ ಬಾಕಿ ಹಣ ಬಿಡುಗಡೆಗೆ ಒತ್ತಾಯ.

ಸಬರ್ಬನ್ ರೈಲು ಮತ್ತು ಮುಂಬೈ ಕಾರಿಡಾರ್ ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಹಾಗೂ ಕಿತ್ತೂರು-ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ವಿನಂತಿ

ಕಳೆದ 12 ವರ್ಷಗಳಿಂದ ಬಾಕಿ ಇರುವ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿಗೆ ಕೋರಿಕೆ.

ಗ್ರಾಮ ಪಂಚಾಯತ್‌ಗಳಿಗೆ ಬರಬೇಕಾದ ₹2,860 ಕೋಟಿ ಅನುದಾನ ಬಿಡುಗಡೆಗೆ ಮನವಿ.

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹26,000 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ.

15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,495 ಕೋಟಿ ಬಿಡುಗಡೆಗೆ ವಿನಂತಿ.

ಭದ್ರಾ ಮೇಲ್ದಂಡೆ ಯೋಜನೆಗೆ ಈ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ನೀಡುವಂತೆ ಮನವಿ

ಮೇಕೆದಾಟು ಯೋಜನೆ, ಕುಡಿಯುವ ನೀರಿನ ಉದ್ದೇಶದ ಈ ಯೋಜನೆಗೆ ಶೀಘ್ರವಾಗಿ ಕೇಂದ್ರದ ಅನುಮೋದನೆಗೆ ಒತ್ತಾಯ.

ಮಹದಾಯಿ ಯೋಜನೆ ಅನ್ವಯ ಕುಡಿಯುವ ನೀರಿನ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರ ಅನುಮತಿ ಕೊಡಿಸಲು ವಿನಂತಿ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !